ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಒಂಭತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝಕರ್ಬರ್ಗ್ 13ನೇ ಸ್ಥಾನ, ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಥೆರೇಸಾ ಮೇ 14ನೇ ಸ್ಥಾನ, ಚೀನಾ ಪ್ರಧಾನಿ ಲಿ ಕೆಕಿಯಾಂಗ್ 15ನೇ ಸ್ಥಾನದಲ್ಲಿದ್ದಾರೆ.
ಇಲ್ಲಿಯತನಕ ಮೊದಲ ಸ್ಥಾನದಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ಥಾನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇದ್ದಾರೆ. ರಷ್ಯಾ ಮೋದಿ ಸೇರಿದಂತೆ ಮೊದಲ ಪಂಕ್ತಿಯ ಹತ್ತು ಸ್ಥಾನದಲ್ಲಿರುವವರು ವಿಶ್ವವನ್ನೇ ಬದಲಾಯಿಸ ಬಲ್ಲವರು ಎಂದು ಫೋರ್ಬ್ಸ್ ಹೇಳಿದೆ.