Publish Date: Mon, 04 Dec 2017 (18:02 IST)
Updated Date: Mon, 04 Dec 2017 (18:09 IST)
ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಚಲಿಸುವ ವ್ಯಾನ್‍ನಿಂದ ಜಿಗಿದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೆದಕ್ ಜಿಲ್ಲೆಯಲ್ಲಿ ಜರುಗಿದೆ.
ಮೆದಕ್ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ರವೆಲ್ಲಿ ಗ್ರಾಮದ ಹತ್ತಿರ ಈ ಘಟನೆ ನಡೆದಿದ್ದು, ಏಳು ತಿಂಗಳ ಗರ್ಭಿಣಿಯಾಗಿದ್ದ ಪೋತುರಾಜುಪಲ್ಲಿಯ ಕಲಾವತಿ(35) ಸಾವನ್ನಪ್ಪಿದ್ದಾರೆ.
ಕೆಲಸ ಮುಗಿಸಿಕೊಂಡು ಕೊಂಡಪಲ್ಲಿ ಗ್ರಾಮದಿಂದ ವ್ಯಾನ್‍ನಲ್ಲಿ ಏಳು ವರ್ಷದ ಮಗಳು ಶ್ರೀಶಾಳೊಂದಿಗೆ ಹತ್ತಿದ್ದಾಳೆ. ಈ ವೇಳೆ ಅಪರಿಚಿತ ವ್ಯಕ್ತಿಗಳಿಬ್ಬರು ಕಲಾವತಿಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾರೆ. ಗರ್ಭಿಣಿ ಚೀರಾಡಿದರೂ ವ್ಯಾನ್‍ನ್ನು ಚಾಲಕ ನಿಲ್ಲಿಸಿಲ್ಲ. ಆಗ ಮಹಿಳೆ ವ್ಯಾನ್‍ನಿಂದ ಜಿಗಿದು ಸಾವನ್ನಪ್ಪಿದ್ದಾಳೆ.
ವ್ಯಾನಿನಿಂದ ಜಿಗಿದು ಬಿದ್ದ ಗರ್ಭಿಣಿಯ ತಲೆಗೆ ತೀವ್ರವಾದ ಪೆಟ್ಟಾಗಿದ್ದು, ಸ್ಥಳದಲ್ಲಿ ಮೃತಪಟ್ಟಿದ್ದಾಳೆ. ಆರೋಪಿಗಳು ಶ್ರೀಶಾಳನ್ನು ಕೆಲವು ಮೀಟರ್‍ಗಳ ದೂರದಲ್ಲಿ ಎಸೆದು ಹೋಗಿದ್ದಾರೆ. ಸ್ಥಳೀಯರ ನೆರವಿನಿಂದ ಶ್ರೀಶಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.