ನವದೆಹಲಿ : ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಕರೆದು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆ ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ವರೆಗೆ ಒಟ್ಟು 7 ಹಂತಗಳಲ್ಲಿ ನಡೆಯಲಿದ್ದು ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಹಾಗೇ ನಿನ್ನೆಯಿಂದಲ್ಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂಬುದಾಗಿ ಮುಖ್ಯ ಚುನಾವಣಾ ಆಯುಕ್ತ ತಿಳಿಸಿದ್ದಾರೆ.
ಮೊದಲ ಹಂತ ಚುನಾವಣೆ – ಏಪ್ರಿಲ್ 11
ಎರಡನೇ ಹಂತದ ಚುನಾವಣೆ – ಏಪ್ರಿಲ್ 18
ಮೂರನೇ ಹಂತದ ಚುನಾವಣೆ – ಏಪ್ರಿಲ್ 23
ನಾಲ್ಕನೇ ಹಂತದ ಚುನಾವಣೆ – ಏಪ್ರಿಲ್ 29
ಐದನೇ ಹಂತದ ಚುನಾವಣೆ – ಮೇ 6
ಆರನೇ ಹಂತದ ಚುನಾವಣೆ – ಮೇ 16
ಏಳನೇ ಹಂತಚ ಚುನಾವಣೆ – ಮೇ 19
ಕಳೆದ ಬಾರಿ ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆದಿದ್ದರೆ, ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏ.18 ಗುರುವಾರ ಮೊದಲ ಹಂತ ನಡೆದರೆ ಏ.23 ಮಂಗಳವಾರ ಎರಡನೇ ಹಂತದ ಚುನಾವಣೆ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.