Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪಣಜಿ : ಕರಾವಳಿ ರಾಜ್ಯದಲ್ಲಿ ಯಾರಿಗೆ ಮುಖ್ಯಮಂತ್ರಿ ಹುದ್ದೆ ಸಿಗುತ್ತದೆ ಎಂಬ ಕುತೂಹಲಕ್ಕೆ ಬಿಜೆಪಿ ಕೊನೆಗೂ ಅಂತ್ಯ ಹಾಡಿದೆ.
ರಾಜ್ಯದಲ್ಲಿ ಸತತ ಮೂರು ಬಾರಿ ಬಿಜೆಪಿ ಗೆದ್ದಿದ್ದು, ಗೋವಾದ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಅವರು ಸತತ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಹೈಕಮಾಂಡ್ ಕೇಂದ್ರ ವೀಕ್ಷಕರಾಗಿ ರಾಜ್ಯಕ್ಕೆ ನಿಯೋಜಿಸಲ್ಪಟ್ಟ ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಹಲವು ಬಿಜೆಪಿ ಹಿರಿಯ ನಾಯಕರು ನಡೆಸಿದ ಸಭೆಯಲ್ಲಿ ಸಾವಂತ್ ಅವರನ್ನು ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಎಂದು ಘೋಷಿಸಲಾಯಿತು.
ಮುಂದಿನ ಐದು ವರ್ಷಗಳ ಕಾಲ ಪ್ರಮೋದ್ ಸಾವಂತ್ ಅವರು ಗೋವಾದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿರಲಿದ್ದಾರೆ.