Publish Date: Sun, 25 Oct 2020 (10:35 IST)
Updated Date: Sun, 25 Oct 2020 (10:36 IST)
ಮುಂಬೈ: ಕಾರು ಕದ್ದು ಪರಾರಿಯಾಗಲೆತ್ನಿಸುತ್ತಿದ್ದ ನಾಲ್ವರ ಪ್ರಯತ್ನ ವಿಫಲಗೊಳಿಸಿದ ಪೊಲೀಸ್ ಪೇದೆಯನ್ನು ಖದೀಮರು ಇರಿದು ಗಾಯಗೊಳಿಸಿದ ಘಟನೆ ಥಾಣೆಯಲ್ಲಿ ನಡೆದಿದೆ.
ನಾಲ್ವರು ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಕದ್ದು ಪರಾರಿಯಾಗಲೆತ್ನಿಸಿದಾಗ ಸ್ಥಳೀಯರು ಸಹಾಯಕ್ಕಾಗಿ ಪೊಲೀಸ್ ಪೇದೆಯನ್ನು ಕೂಗಿದ್ದರು. ಆತ ಖದೀಮರನ್ನು ಚೇಸ್ ಮಾಡಿದಾಗ ಚೂರಿಯಿಂದ ಇರಿದಿದ್ದಾರೆ.