Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಯೋಧ್ಯೆ ರಾಮನ ಹಣೆಗೆ ಸೂರ್ಯ ತಿಲಕ ಸ್ಪರ್ಶಿಸುವುದನ್ನು ಹೆಲಿಕಾಪ್ಟರ್ ನಲ್ಲಿ ವೀಕ್ಷಿಸಿದ ಪ್ರಧಾನಿ ಮೋದಿ

Modi

Krishnaveni K

ನವದೆಹಲಿ , ಬುಧವಾರ, 17 ಏಪ್ರಿಲ್ 2024 (13:38 IST)
Photo Courtesy: Twitter
ನವದೆಹಲಿ: ಇಂದು ರಾಮನವಮಿ ನಿಮಿತ್ತ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಹಣೆಗೆ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಈ ದೃಶ್ಯಾವಳಿಯನ್ನು ಪ್ರಧಾನಿ ಮೋದಿ ಕೂಡಾ ಲೈವ್ ಆಗಿ ವೀಕ್ಷಿಸಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿ ರಾಮಮಂದಿರವನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು. ಈ ವೇಳೆ ಇನ್ನು ಮುಂದೆ ಪ್ರತೀ ವರ್ಷ ರಾಮನವಮಿಯಂದು ಬಾಲರಾಮನ ಹಣೆಗೆ ಸೂರ್ಯ ತಿಲಕ ಸ್ಪರ್ಶಿಸಲಿದೆ ಎಂದು ಘೋಷಣೆ ಮಾಡಲಾಗಿತ್ತು.

ಆಧುನಿಕ ವಾಸ್ತು ಶಿಲ್ಪ ತಂತ್ರಜ್ಞಾನ ಬಳಸಿ ಸೂರ್ಯ ರಶ್ಮಿ ರಾಮನ ಹಣೆಗೆ ಬೀಳುವಂತೆ ಮಾಡಲಾಗಿದೆ. ಇಂದು ಈ ಅಪರೂಪದ ವಿದ್ಯಮಾನಕ್ಕೆ ದೇಶವಿಡೀ ಸಾಕ್ಷಿಯಾಗಿತ್ತು. ದೂರದರ್ಶನದಲ್ಲಿ ಈ ದೃಶ್ಯದ ನೇರಪ್ರಸಾರ ಮಾಡಲಾಗಿತ್ತು. ಹೀಗಾಗಿ ಕೋಟ್ಯಾಂತರ ಮಂದಿ ಇದನ್ನು ವೀಕ್ಷಿಸಿದ್ದರು.

ಪ್ರಧಾನಿ ಮೋದಿ ಇದೀಗ ಚುನಾವಣೆ ಪ್ರಚಾರ ನಿಮಿತ್ತ ಬ್ಯುಸಿ ಓಡಾಟದ ನಡುವೆಯೂ ಈ ದೃಶ್ಯಾವಳಿಯನ್ನು ಲೈವ್ ಆಗಿ ವೀಕ್ಷಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಮಾಡುತ್ತಿರುವಾಗ ಟ್ಯಾಬ್ ನಲ್ಲಿ ಲೈವ್ ಆಗಿ ಸೂರ್ಯ ತಿಲಕ ವಿದ್ಯಮಾನ ವೀಕ್ಷಿಸಿದ್ದಾರೆ. ಇದು ನನಗೆ ಅತೀವ ಭಾವುಕ ಕ್ಷಣವಾಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲರಾಮನ ಹಣೆಗೆ ಸೂರ್ಯ ತಿಲಕ: ದೃಶ್ಯೆ ನೋಡಿ ಪುಳಕಿತರಾದ ಭಕ್ತರು