ನವದೆಹಲಿ: 500, 1000 ರೂ. ಗಳ ನೋಟು ಅಪನಗದೀಕರಣಗೊಳಿಸಿ ದೇಶದಲ್ಲಿ ಸುಂಟರಗಾಳಿ ಎಬ್ಬಿಸಿದ್ದ ಪ್ರಧಾನಿ ಮೋದಿ ಇದೀಗ ಮತ್ತೊಂದು ಬಿರುಗಾಳಿ ಎಬ್ಬಿಸಲು ಹೊರಟಿದ್ದಾರಾ? ಹಾಗೊಂದು ವರದಿ ಹರಿದಾಡುತ್ತಿದೆ.
ಮಾಧ್ಯಮಗಳ ವರದಿ ಪ್ರಕಾರ ಶೀಘ್ರದಲ್ಲೇ ಪ್ರಧಾನಿ ಮೋದಿ, 10, 5, 2, ಮತ್ತು 1 ರೂ. ನಾಣ್ಯಗಳ ನಿಷೇಧ ಮಾಡಲಿದ್ದಾರಂತೆ. ತೆರಿಗೆಗಳ್ಳರು ಎರಡು ಸಾವಿರ ರೂಪಾಯಿ ನೋಟು ಇಟ್ಟುಕೊಂಡಿದ್ದಾರೆಂಬ ಸುದ್ದಿಯ ಬೆನ್ನಲ್ಲೇ ಮೋದಿ ಹೊಸ 2 ಸಾವಿರ ರೂ. ನೋಟುಗಳನ್ನೂ ಹಿಂಪಡೆಯಲು ಉದ್ದೇಶಿಸಿದ್ದಾರಂತೆ.
ಇನ್ನು, ನೋಟುಗಳ ಮುದ್ರಣಕ್ಕೆ ಹೋಲಿಸಿದರೆ, ನಾಣ್ಯಗಳ ಮುದ್ರಣಕ್ಕೆ ಹೆಚ್ಚು ವೆಚ್ಚ ತಗುಲುತ್ತದೆ. ಹಾಗಾಗಿ ನಾಣ್ಯಗಳ ಬದಲಿಗೆ ನೋಟುಗಳನ್ನು ಮುದ್ರಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಅಲ್ಲದೆ ನೋಟುಗಳು ಬೇಗನೇ ಹಾಳಾಗಬಹುದು. ಆದರೆ ನಾಣ್ಯಗಳನ್ನು ಹೆಚ್ಚು ದಿನ ಸಂಗ್ರಹಿಸಿಡಬಹುದೆಂಬ ಕಾರಣಕ್ಕೆ ನಾಣ್ಯ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.