ಬೆಂಗಳೂರು: ಸಿಎಂ ಸಿದ್ಧರಾಮಯ್ಯ ವಿರೋಧದ ನಡುವೆಯೂ ಮಳೆಗಾಗಿ ನೀರಾವರಿ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಭಾಗಮಂಡಲದಲ್ಲಿ ಪರ್ಜನ್ಯ ಹೋಮ ನಡೆಯಲಿದೆ.
ಪೂಜೆಗೆ ಸರ್ಕಾರಿ ದುಡ್ಡು ಬಳಸಬೇಡಿ ಎಂದು ಸಿಎಂ ಹುಕುಂ ಹೊರಡಿಸಿದ್ದರೂ, ನೀರಾವರಿ ಸಚಿವರು ಸ್ವ ಹಿತಾಸಕ್ತಿಯಿಂದ ಕೇರಳದಿಂದ ಪುರೋಹಿತರನ್ನು ಕರೆಸಿಕೊಂಡು ಪೂಜೆ ನಡೆಸುತ್ತಿದ್ದಾರೆ.
ಈ ನಡುವೆ ಸಿಎಂಗೆ ಮಾತ್ರ ಇದರಲ್ಲಿ ನಂಬಿಕೆಯಿಲ್ಲ. ಇದು ನಮ್ಮ ನಮ್ಮ ನಂಬಿಕೆಗೆ ಬಿಟ್ಟ ವಿಚಾರ. ಪರ್ಜನ್ಯ ಹೋಮ ಮಾಡುವುದು ಮೂಢನಂಬಿಕೆಯಲ್ಲ ಎಂದು ನೀರಾವರಿ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಮೂಢನಂಬಿಕೆಗಳ ವಿರೋಧಿ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ ಮಳೆಗಾಗಿ ದೇವರ ಮೊರೆ ಹೋಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಅತ್ತ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಕೂಡಾ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.