Publish Date: Tue, 01 Aug 2017 (05:46 IST)
Updated Date: Tue, 01 Aug 2017 (05:49 IST)
ನವದೆಹಲಿ: ಆಗಸ್ಟ್ 15 ರಂದು ದೇಶದ ಪ್ರಧಾನಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾಡುವ ಭಾಷಣ ಅತ್ಯಂತ ಪ್ರಮುಖದ್ದಾಗಿರುತ್ತದೆ. ಆದರೆ ಈ ಬಾರಿ ಪ್ರಧಾನಿ ಏನು ಭಾಷಣ ಮಾಡಬೇಕೆಂದು ನೀವೂ ಐಡಿಯಾ ಕೊಡಬಹುದು.
ಹೌದು. ಪ್ರಧಾನಿ ಮೋದಿ ದೇಶದ ಜನರಿಗೆ ಅಂತಹದ್ದೊಂದು ಅವಕಾಶ ಕೊಟ್ಟಿದ್ದಾರೆ. ‘ಅಂದು ನಾನು ಮಾಡುವ ಭಾಷಣ ನಿಮ್ಮೆಲ್ಲರ ಧ್ವನಿಯಾಗಿರಲಿದೆ. ನಾನು ನಿಮ್ಮ ಧ್ವನಿಯನ್ನು ಹೊರಹಾಕುವ ಒಂದು ಮಾಧ್ಯಮವಷ್ಟೇ. ಹಾಗಾಗಿ ನಾನು ಏನು ಹೇಳಬೇಕೆಂದು ನೀವೇ ಐಡಿಯಾ ಕೊಡಿ’ ಎಂದು ಆಹ್ವಾನ ಕೊಟ್ಟಿದ್ದಾರೆ.
ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. 18002090920 ಎಂಬ ನಂಬರ್ ಗೆ ಮಿಸ್ ಕಾಲ್ ಕೊಟ್ಟುನಿಮ್ಮ ಮೊಬೈಲ್ ಗೆ ಪ್ರಧಾನಿ ಮೋದಿ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಫೋನ್ ನಂಬರ್ ಎಂಟರ್ ಮಾಡಿ
http://www.narendramodi.in/downloadap ಎಂಬ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಸಲಹೆಗಳನ್ನು ಕೊಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ