Publish Date: Mon, 14 Aug 2017 (09:36 IST)
Updated Date: Mon, 14 Aug 2017 (09:40 IST)
ನವದೆಹಲಿ: ಪ್ರಧಾನಿ ಮೋದಿ ನಾಳೆಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಏನು ಮಾತನಾಡಬೇಕೆಂದು ನಮೋ ಆಪ್ ಮೂಲಕ ಸಲಹೆ ನೀಡಿ ಎಂದು ಆಹ್ವಾನ ನೀಡಿದ್ದರು.
ಪ್ರಧಾನಿ ಆಹ್ವಾನಕ್ಕೆ ಮನಸೋತ ಸಾರ್ವಜನಿಕರು ಇದೀಗ ಸುಮಾರು 9 ಸಾವಿರ ಸಲಹೆ ಕೊಟ್ಟಿದ್ದಾರೆ. ಇದೀಗ ಯಾವುದನ್ನು ಆಯ್ಕೆ ಮಾಡಬೇಕೆಂಬುದು ಪ್ರಧಾನಿಗೆ ತಲೆನೋವಾಗುವುದಂತೂ ಸಹಜ.
ಜುಲೈ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಷಣಕ್ಕೆ ಸಲಹೆ ನೀಡಲು ಆಹ್ವಾನ ಕೊಟ್ಟಿದ್ದರು. ಅದರಂತೆ ಸಾರ್ವಜನಿಕರು, ಶಿಕ್ಷಣ, ಮಹಿಳಾ ಸುರಕ್ಷತೆ, ಡಿಜಿಟಲ್ ಸೇವೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಭಾಷಣದಲ್ಲಿ ಬೆಳಕು ಚೆಲ್ಲಲು ಸಲಹೆ ನೀಡಿದ್ದಾರೆ.