ನವದೆಹಲಿ: ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಯೂ ಟ್ಯೂಬ್ ವಾಹಿನಿಯಲ್ಲೂ ಅವರು ಆಗಾಗ ವಿಡಿಯೋಗಳನ್ನು ಪ್ರಕಟಿಸುತ್ತಿರುತ್ತಾರೆ.
ಹೀಗಾಗಿ ಅವರಿಗೆ ಸಾಕಷ್ಟು ಚಂದಾದಾರರಿದ್ದಾರೆ. ಇದೀಗ ಯೂ ಟ್ಯೂಬ್ ಚಂದಾದಾರರ ಸಂಖ್ಯೆ ವಿಚಾರದಲ್ಲಿ ಪ್ರಧಾನಿ ಮೋದಿ ವಿಶ್ವದಾಖಲೆಯನ್ನೇ ಮಾಡಿದ್ದಾರೆ.
ಯೂ ಟ್ಯೂಬ್ ನಲ್ಲಿ 20 ಮಿಲಿಯನ್ ಚಂದಾದಾರರನ್ನು ಹೊಂದಿದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಅವರ ನಂತರದ ಸ್ಥಾನ ಬ್ರೆಜಿಲ್ ಅಧ‍್ಯಕ್ಷ ಜೇರ್ ಬೊಲ್ಸನೊರಾ ಅವರದ್ದು. ಅವರಿಗೆ 6.4 ಮಿಲಿಯನ್ ಚಂದಾದಾರರಿದ್ದಾರೆ.
ಮೋದಿ ಚಾನೆಲ್ ಇದುವರೆಗೆ 4.5 ಕೋಟಿ (450 ಕೋಟಿ) ವೀಕ್ಷಣೆ ಕಂಡಿದೆ. ಇದು ವಿಶ್ವದ ಯಾವುದೇ ರಾಜಕೀಯ ನಾಯಕನಿಗೂ ಗರಿಷ್ಠ ವೀಕ್ಷಣೆಯಾಗಿದೆ. ಈ ಮೂಲಕ ವಿಶ್ವದ ಜನಪ್ರಿಯ ನಾಯಕ ಎಂಬ ಹೆಗ್ಗಳಿಕೆ ಅವರದ್ದಾಗಿದೆ.