Publish Date: Wed, 24 Feb 2021 (07:16 IST)
Updated Date: Wed, 24 Feb 2021 (07:17 IST)
ಮಧುರೈ : ತಮಿಳುನಾಡಿನ ಮಧುರೈ ನಲ್ಲಿ ವ್ಯಕ್ತಿಯೊಬ್ಬ ಮರದ ಕಟ್ಟಿಗೆಯಿಂದ ನಾಯಿಯನ್ನು ಹೊಡೆದು ಕೊಂದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದ್ದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಲಿಂಡರ್ ವಿತರಣಾ ಏಜೆನ್ಸಿಯ ಸಿಬ್ಬಂದಿಯೊಬ್ಬ ನಾಯಿ ಪದೇ ಪದೇ ಅವನನ್ನು ನೋಡಿ ಬೊಗಳುತ್ತಿದ್ದರಿಂದ ನಾಯಿಯನ್ನು ಕೊಲ್ಲಲು ವ್ಯಕ್ತಿಯೊಬ್ಬನಿಗೆ 500ರೂ ನೀಡಿದ್ದಾನೆ. ಅದರಂತೆ ಹಣ ಪಡೆದ ವ್ಯಕ್ತಿ ನಾಯಿಯನ್ನು ಹೊಡೆದು ಸಾಯಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ. ಗ್ರಾಮದ ಆಡಳಿತಾಧಿಕಾರಿ ಈ ಬಗ್ಗೆ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.