ಪುಣೆ : ಕೋಳಿ ಸಾಕಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆಹಾರ ಉತ್ಪಾದಕ ಘಟಕದ ವಿರುದ್ಧ ಪ್ರಕರಣ ದಾಖಲಿಸಲು ಹೊರಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ವ್ಯಕ್ತಿ ಕೋಳಿಗಳಿಗೆ ಪುಣೆಯ ಅಹ್ಮದ್ ನಗರದ ಕೋಳಿ ಆಹಾರ ಉತ್ಪಾದಕ ಘಟಕದಿಂದ ಫುಡ್ ಅನ್ನು ತಂದು ಹಾಕಿದ. ಆದರೆ ಆ ಫುಡ್ ತಿಂದ ಕೋಳಿಗಳು ಮೊಟ್ಟೆ ಹಾಕುವುದನ್ನು ನಿಲ್ಲಿಸಿವೆಯಂತೆ. ಹೀಗಾಗಿ ವ್ಯಕ್ತಿ ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ್ದಾನೆ. ಆಗ ಕಂಪೆನಿ ಆತನಿಗೆ ಪರಿಹಾರ ನೀಡುವುದಾಗಿ ತಿಳಿಸಿದೆ.
ಹಾಗೇ ಪಶುಸಂಗೋಪನಾ ಅಧಿಕಾರಿ ಈ ಆಹಾರವನ್ನು ಪರಿಶೀಲಿಸಿದಾಗ ಕೆಲವು ಆಹಾರಗಳು ನಿರ್ದಿಷ್ಟ ತಳಿಯ ಕೋಳಗಳಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.