Publish Date: Tue, 20 Apr 2021 (07:11 IST)
Updated Date: Tue, 20 Apr 2021 (07:12 IST)
ಪುಣೆ : ವಾಗ್ವಾದ ನಡೆಸಿದ್ದಕ್ಕೆ 16 ವರ್ಷದ ಬಾಲಕನನ್ನು ಆತನ ಸ್ನೇಹಿತರು ಬಾವಿಗೆ ತಳ್ಳಿ ಕೊಂದ ಘಟನೆ ಪುಣೆಯಲ್ಲಿ ನಡೆದಿದೆ.
ಬಾವಿಯ ಶವ ಸಿಕ್ಕಾಗ ಪೊಲೀಸರು ಇದು ಆಕಸ್ಮಿಕ ಸಾವೆಂದು ಪ್ರಕರಣ ದಾಖಲಿಸಿದ್ದರು. ಆತನ ಸ್ನೇಹಿತರು ಕಾಲು ಜಾರಿ ಬಾವಿಗೆ ಬಿದ್ದಿರುವುದಾಗಿ ತಿಳಿಸಿದ್ದಾರೆ. ಆದರೆ ಮೃತನ ತಂದೆ ಆತನ ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತನ ಸ್ನೇಹಿತರಿಬ್ಬರನ್ನು ವಿಚರಣೆ ನಡೆಸಿದಾಗ ಅವರು ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.