Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನರು

ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನರು
ಕೋಲ್ಕತ್ತಾ , ಗುರುವಾರ, 31 ಆಗಸ್ಟ್ 2023 (07:54 IST)
ಕೋಲ್ಕತ್ತಾ : ಬುಧವಾರ (ಇಂದು) ರಾತ್ರಿ ಶ್ರಾವಣ ಪೌರ್ಣಮಿ ಆಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಸೂಪರ್ ಬ್ಲೂ ಮೂನ್ ದರ್ಶನವಾಗಿದೆ. ಇತರೇ ದಿನಗಳಿಗಿಂತ ಚಂದ್ರ ದೊಡ್ಡದಾಗಿ ಕಾಣಿಸಿಕೊಂಡಿದ್ದು, ಈ ಕೌತುಕವನ್ನು ಜನರು ಕಣ್ತುಂಬಿಕೊಂಡಿದ್ದಾರೆ.

ಆಗಸ್ಟ್ 30 ರಂದು ಕಾಣಿಸಿಕೊಳ್ಳುವ ಸೂಪರ್ ಬ್ಲೂ ಮೂನ್ ಖಗೋಳ ಘಟನೆಯಾಗಿದ್ದು, ಇದು 10 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಬಾಹ್ಯಾಕಾಶದಲ್ಲಿ ಚಂದ್ರನೊಂದಿಗೆ ಸಂಭವಿಸುವ ಇದೇ ರೀತಿಯ ಖಗೋಳ ಘಟನೆಗಳನ್ನು ಬ್ಲೂ ಮೂನ್, ನ್ಯೂ ಮೂನ್, ಫುಲ್ ಮೂನ್, ಸೂಪರ್ ಮೂನ್ ಎಂದೂ ಕರೆಯಲಾಗುತ್ತದೆ.

ಅದೇ ರೀತಿ ಇಂದು ಪಶ್ಚಿಮ ಬಂಗಾಳದ ಕೋಲ್ಕತ್ತಾ, ಅಸ್ಸಾಂನ ಗುವಾಹಟಿ ಸೇರಿದಂತೆ ವಿವಿಧ ಕೆಲವು ರಾಜ್ಯಗಳಲ್ಲಿ ಸೂಪರ್ ಮೂನ್ ಕಾಣಿಸಿಕೊಂಡಿದೆ. ಕೆಲವೆಡೆ ಮಳೆ ಮೋಡದ ವಾತಾವರಣದಿಂದಾಗಿ ನಿರಾಸೆ ಮೂಡಿಸಿದೆ. 

ಸೂಪರ್ ಬ್ಲೂ ಮೂನ್ ಸಾಮಾನ್ಯ ದಿನಗಳಿಗಿಂತ 14 ಪ್ರತಿಶತ ದೊಡ್ಡದಾಗಿ ಮತ್ತು 30 ಪ್ರತಿಶತ ಪ್ರಕಾಶಮಾನವಾಗಿ ಕಾಣುತ್ತದೆ. ಇಂದು ಯಾವುದೇ ಉಪಕರಣಗಳಿಲ್ಲದೇ ಸೂಪರ್ ಬ್ಲೂ ಮೂನ್ ಅನ್ನು ಸುಲಭವಾಗಿ ನೋಡಬಹುದು. ಚಂದ್ರನು ನೀಲಿ ಬಣ್ಣದಲ್ಲಿ ಕಾಣುವುದಿಲ್ಲ, ಅದು ಸ್ವಲ್ಪ ತಿಳಿ ಕಿತ್ತಳೆ ಅಥವಾ ಹಳದಿ ಬಣ್ಣದಲ್ಲಿ ಕಾಣುತ್ತದೆ.

ಸುತ್ತಲೂ ಸಾಕಷ್ಟು ಮಾಲಿನ್ಯವಿದ್ದಾಗ, ಇದರಿಂದಾಗಿ ಧೂಳಿನ ಕಣಗಳು ಗಾಳಿಯಲ್ಲಿ ಹರಡಿಕೊಂಡಿದ್ದರೆ ಮಾತ್ರ ಚಂದ್ರನು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಬ್ಲೂ ಮೂನ್ ಅಥವಾ ಸೂಪರ್ ಬ್ಲೂ ಮೂನ್ ನಲ್ಲಿ ಚಂದ್ರನು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದರಂತೆ ಅಲ್ಲಲ್ಲಿ ಚಂದಿರನ ಕೌತುಕದ ದರ್ಶನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟೋಕ್ ಆಗಿರುವುದು ನಿಜ ಈಗ ಯಾವುದೆ ತೊಂದರೆ ಇಲ್ಲ-ಡಾ ಸತೀಶ್ ಚಂದ್ರ