Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರೇತಾತ್ಮಗಳ ವಿವಾಹ : ಮೃತಪಟ್ಟವರ ಆಸೆ ಈಡೇರಿಸೋ ವಿಶಿಷ್ಠ ಆಚರಣೆ

ಪ್ರೇತಾತ್ಮಗಳ ವಿವಾಹ : ಮೃತಪಟ್ಟವರ ಆಸೆ ಈಡೇರಿಸೋ ವಿಶಿಷ್ಠ ಆಚರಣೆ
ಮಂಗಳೂರು , ಭಾನುವಾರ, 13 ಆಗಸ್ಟ್ 2023 (08:05 IST)
ಮಂಗಳೂರು : ಅದೊಂದು ತುಳುನಾಡಿನಲ್ಲಿ ನಡೆಯೋ ವಿಭಿನ್ನ ಮದುವೆ. ಮದುವೆಯಾದ ಜೋಡಿ ಸುಖವಾಗಿರಲಿ ಎಂದು ಹಾರೈಸಿ ಹಿರಿಯರ ಆಶೀರ್ವಾದ ಕೂಡ ನವಜೋಡಿಗಳಿಗೆ ಸಿಕ್ಕಿತ್ತು. ವಿಶೇಷ ಅಂದ್ರೆ ಆ ನವಜೋಡಿಗಳು ಮದುವೆಯ ಸಮಾರಂಭದಲ್ಲಿದ್ದ ಯಾರ ಕಣ್ಣಿಗೂ ಕಾಣಿಸದೇ ಹಸಮಣೆ ಏರಿ ಎಲ್ಲಾ ಶಾಸ್ತ್ರ ಮುಗಿಸಿದ್ರು.
 
ಹೌದು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವರ್ಷಕ್ಕೊಂದು ಬಾರಿ ಇಂತಹ ಮದುವೆಗಳು ನಡೆಯುತ್ತವೆ. ತುಳು ಮಾಸ ಆಟಿ (ಆಷಾಢ) ಅಂದ್ರೆ ಯಾವುದೇ ಶುಭಕಾರ್ಯಗಳು ಕರಾವಳಿ ಭಾಗದಲ್ಲಿ ನಡೆಯೋದಿಲ್ಲ. ಆದರೆ ಈ ಸಮಯದಲ್ಲಿ ಕುಟುಂಬದಲ್ಲಿ ಯಾರಾದ್ರೂ ಮದುವೆಯಾಗದೇ ಅಕಾಲಿಕವಾಗಿ ಮೃತಪಟ್ಟಿದ್ದರೆ ಅಂತವರ ಮದುವೆ ಮಾಡೋ ಸಂಪ್ರದಾಯ ಇದೆ.

ಇಲ್ಲೂ ನಡೆದಿರೋದು ಅಂತಹದೇ ಒಂದು ಮದುವೆಯ ಸಂಪ್ರದಾಯ. ಬಂಟ್ವಾಳ ತಾಲೂಕಿನ ವಗ್ಗ ಎಂಬಲ್ಲಿಯ ವಧುವಿನ ಕುಟುಂಬ ಹಾಗೂ ಉಳ್ಳಾಲ ತಾಲೂಕಿನ ಕೋಣಾಜೆ ಸಮೀಪದ ಬೊಳ್ಮ ಎಂಬಲ್ಲಿಯ ವರನ ಕುಟುಂಬದ ನಡುವೆ ಮದುವೆ ಸಂಬಂಧ ಏರ್ಪಟ್ಟಿದೆ.

ಬಂಟ್ವಾಳ ತಾಲೂಕಿನ ವಗ್ಗದ ಮಾಂಗಜೆ ಎಂಬಲ್ಲಿಯ ಸಂಜೀವ ಪೂಜಾರಿಯವರ ಮಗಳು ವಿಶಾಲಾಕ್ಷಿ 2 ವರ್ಷದ ಮಗುವಾಗಿದ್ದಾಗ ಅಂದ್ರೆ ಸರಿ ಸುಮಾರು 35 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಇತ್ತ ಉಳ್ಳಾಲದ ಕೊಣಾಜೆ ಸಮೀಪದ ಬೊಳ್ಮ ಗ್ರಾಮದ ಲಕ್ಷ್ಮಣ ಪೂಜಾರಿಯವರ ಪುತ್ರ ಧರಣೇಶ್ ಕಳೆದ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. 

ಹೃದಯದ ತೊಂದರೆ ಇದ್ದ ಕಾರಣ ಧರಣೇಶ್ ಅವರಿಗೆ ಮದುವೆ ಮಾಡುವ ಬಗ್ಗೆ ಮನೆಯವರು ಯೋಚನೆ ಮಾಡಿರಲಿಲ್ಲ. ಆದರೆ ಧರಣೇಶ್ಗೆ ಮದುವೆ ಆಗಬೇಕು ಅನ್ನೋ ಆಸೆ ಇತ್ತಾದ್ರೂ ಹೃದಯದ ಕಾಯಿಲೆಯಿಂದ ಗುಣಮುಖವಾಗದೆ ಮೃತಪಟ್ಟಿದ್ದರು. ವಧುವಿನ ಕಡೆಯವರಿಗೆ ಜ್ಯೋತಿಷ್ಯದಲ್ಲಿ ಕಂಡು ಬಂದಂತೆ ವಿಶಾಲಕ್ಷಿಗೆ ಮದುವೆ ಮಾಡಬೇಕಾಗಿತ್ತು. ಈ ವೇಳೆ ವರಾನ್ವೇಶಣೆ ನಡೆಸಿದಾಗ ಧರಣೇಶನ ಸಂಬಂಧ ಸಿಕ್ಕಿ ಎಲ್ಲಾ ಮಾತುಕತೆ ನಡೆಸಿ ಸಂಪ್ರದಾಯದಂತೆ ಮದುವೆ ಕಾರ್ಯ ಮಾಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಡಿಎ ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದೇನೆ-ಡಿಕೆಶಿ