ಹೈದರಾಬಾದ್: ಕರ್ನಾಟಕ ಚುನಾವಣೆ ನಂತರ ಆಂಧ್ರ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರಲಿದೆ. ಈ ಹಿನ್ನಲೆಯಲ್ಲಿ ಅಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.
ಇತ್ತೀಚೆಗಷ್ಟೇ ಆಂಧ್ರಕ್ಕೆ ವಿಶೇಷ ಸ್ಥಾನಮಾನ ಕೊಡಲಿಲ್ಲ ಎಂಬ ಕಾರಣಕ್ಕೆ ಮೈತ್ರಿ ಮುರಿದುಕೊಂಡ ಸಿಎಂ ಚಂದ್ರಬಾಬು ನಾಯ್ಡು ಬೆನ್ನಲ್ಲೇ ಜನ ಸೇನಾ ಪಕ್ಷದ ನಾಯಕ, ನಟ ಪವನ್ ಕಲ್ಯಾಣ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಂದ್ರಬಾಬು ನಾಯ್ಡು ಅವರಂತೆ ನಾನು ಕೇಂದ್ರಕ್ಕೆ ಹೆದರೋನಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ಆಂಧ್ರಕ್ಕೆ ವಿಶೇಷ ಕೊಡುಗೆ ನೀಡದ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಕಿಡಿ ಕಾರಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಥವಾ ಟಿಡಿಪಿ ಜತೆ ಪವನ್ ಪಕ್ಷ ಮೈತ್ರಿ ಮಾಡಿಕೊಳ್ಳಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅದೇನಿದ್ದರೂ ಈ ಚುನಾವಣೆಯಲ್ಲಿ ಆಂಧ್ರದ ರಾಜಕೀಯ ಪಕ್ಷಗಳಿಗೆ ವಿಶೇಷ ಸ್ಥಾನಮಾನ ಕೊಡುಗೆ ದಾಳವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ