Publish Date: Thu, 04 Sep 2025 (18:44 IST)
Updated Date: Thu, 04 Sep 2025 (18:48 IST)
ನವದೆಹಲಿ: ದೆಹಲಿ-ಕೋಲ್ಕತ್ತಾ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಸೋಮವಾರ ಪ್ರಯಾಣಿಕನೊಬ್ಬ "ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದು ಮತ್ತು ಸಹ ಪ್ರಯಾಣಿಕರಿಗೆ ತೊಂದರೆ" ನೀಡಿದ ಘಟನೆ ಬಗ್ಗೆ ದೂರು ಬಂದಿದೆ. ಇದೀಗ ಆತನ "ಅಶಿಸ್ತಿನ ವರ್ತನೆ" ಗಾಗಿ ಭದ್ರತೆಗೆ ಹಸ್ತಾಂತರಿಸಲಾಗಿದೆ.
ಸೆಪ್ಟೆಂಬರ್ 1, 2025 ರಂದು ಇಂಡಿಗೋ ಫ್ಲೈಟ್ 6E 6571 ದೆಹಲಿಯಿಂದ ಕೋಲ್ಕತ್ತಾಗೆ ಹೊರಟಿತ್ತು.
ಒಬ್ಬ ಗ್ರಾಹಕರು ಮದ್ಯದ ಅಮಲಿನಲ್ಲಿ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಮತ್ತು ಸ್ಥಾಪಿತವಾದ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದು ಕಂಡುಬಂದಿದೆ ಹೇಳಿಕೆಯಲ್ಲಿ ಉಲ್ಲೇಖವಾಗಿದೆ.
IndiGo ಯಾವುದೇ ರೀತಿಯ ವಿಚ್ಛಿದ್ರಕಾರಕ ಅಥವಾ ನಿಂದನೀಯ ನಡವಳಿಕೆಯ ಬಗ್ಗೆ ಶೂನ್ಯ-ಸಹಿಷ್ಣು ನೀತಿಯನ್ನು ನಿರ್ವಹಿಸುತ್ತದೆ ಮತ್ತು ಎಲ್ಲ ಗ್ರಾಹಕರು ಮತ್ತು ಸಿಬ್ಬಂದಿಗೆ ಸುರಕ್ಷಿತ, ಗೌರವಾನ್ವಿತ ಮತ್ತು ಅಂತರ್ಗತ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಅದು ಹೇಳಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಯಾಣಿಕ ಕ್ಯಾಬಿನ್ ಸಿಬ್ಬಂದಿ ಬಳಿ ವಿಮಾನದಲ್ಲಿ ತನಗೆ ಧೂಮಪಾನ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ.
Sampriya
Publish Date: Thu, 04 Sep 2025 (18:44 IST)
Updated Date: Thu, 04 Sep 2025 (18:48 IST)