ಸಂಸದರ ಸಂಬಳವನ್ನು 100% ಏರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮತ್ತೀಗ ಅವರ ಸಂಬಳ 50,000ದಿಂದ 1 ಲಕ್ಷಕ್ಕೆ ಏರಿಕೆಯಾಗಲಿದೆ.
ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ನೇತೃತ್ವದ ಸಂಸದರ ವೇತನ ಮತ್ತು ಭತ್ಯೆಗಳ ಸಮಿತಿ ಮಾಡಿದ್ದ ಶಿಫಾರಸುಗಳಿಗೆ ಪ್ರಧಾನಿ ಕಾರ್ಯಾಲಯ ಸಮ್ಮತಿ ಸೂಚಿಸಿದೆ. ವೇತನ ಮಾತ್ರವಲ್ಲ ಭತ್ಯೆ ಕೂಡ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಸಂಸದರು ತಿಂಗಳಿಗೆ ವೇತನ ಮತ್ತು ಭತ್ಯೆ ರೂಪದಲ್ಲಿ 1.90 ಲಕ್ಷ ಪಡೆಯುತ್ತಿದ್ದಾರೆ. ಮತ್ತೀಗ ಅದು ದುಪ್ಪಟ್ಟಾಗಿ 2.80ಲಕ್ಷಕ್ಕೆ ಏರಿಕೆಯಾಗಲಿದೆ.
ಸಂಸದರ ವೇತನವನ್ನು ಅವರೇ ನಿರ್ಧರಿಸುವುದು ಪ್ರಧಾನಿ ಮೋದಿ ಅವರಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಪ್ರತ್ಯೇಕ ಆಯೋಗವನ್ನು ನೇಮಿಸಲು ಪ್ರಧಾನಿ ಮೋದಿ ಅವರು ಬಯಸಿದ್ದರು. ಆದರೆ ಸಂಸದರ ಒತ್ತಡಕ್ಕೆ ಕೊನೆಗೂ ಬಾಗಿದ ಅವರು ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ