ದೆಹಲಿಯಲ್ಲಿ ಮಾಜಿ ಯೋಧರೊಬ್ಬರು ಆತ್ಮಹತ್ಯೆಗೆ ಶರಣಾಗಿರುವುದನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯ್ದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮೋದಿ ಆಡಳಿತ ಬಂದಾಗಿನಿಂದ ರೈತರು ಮತ್ತು ಯೋಧರು ಸಾವಿಗೆ ಶರಣಾಗುತ್ತಿದ್ದಾರೆ ಎಂದಿದ್ದಾರೆ.
'ಏಕ ಶ್ರೇಣಿ, ಏಕ ಪಿಂಚಣಿ' ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಮೋದಿ ಸುಳ್ಳು ಹೇಳುತ್ತಾರೆ. ಕೇಂದ್ರ ಕೊಟ್ಟ ಮಾತಿನಂತೆ ನಡೆದಿದ್ದರೆ ರಾಮ್ ಕಿಶನ್ ಗರ್ಹವಾಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮೋದಿ ರಾಜ್ಯದಲ್ಲಿ ರೈತರು ಮತ್ತು ಯೋಧರು ಸಾವಿಗೆ ಶರಣಾಗುತ್ತಿದ್ದಾರೆ. ಅದರರ್ಥ 'ಏಕ ಶ್ರೇಣಿ, ಏಕ ಪಿಂಚಣಿ' ಯೋಜನೆಯನ್ನು ಜಾರಿಗೆ ತರುತ್ತೇನೆ ಎಂದು ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ಯೋದನೆಯನ್ನು ಜಾರಿಗೆ ತಂದಿದ್ದೇ ಆದರೆ ರಾಮ್ ಕಿಶನ್ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಟ್ವಿಟರ್ ಮೂಲಕ ಕೇಜ್ರಿವಾಲ್ ಸವಾಲು ಹಾಕಿದ್ದಾರೆ.
ನಮ್ಮ ಸೈನಿಕರು ಗಡಿಯಲ್ಲಿ ಬಾಹ್ಯ ಶತ್ರುಗಳ ಜತೆಯಲ್ಲಿ ಹೋರಾಡುವುದಲ್ಲದೆ, ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಆಂತರಿಕವಾಗಿ ಸಹ ಹೋರಾಡಬೇಕಾಗಿದೆ ಎಂಬುದು ಬಹಳ ಖೇದಕರ ವಿಚಾರ ಎಂದಿದ್ದಾರೆ ಕೇಜ್ರಿವಾಲ್.
ಸಂಪೂರ್ಣ ದೇಶ ಯೋಧರ ಹಕ್ಕುಗಳ ಪರವಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ ದೆಹಲಿ ಸಿಎಂ.
'ಏಕ ಶ್ರೇಣಿ-ಏಕ ಪಿಂಚಣಿ' ಯೋಜನೆ ಜಾರಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಮಾಜಿ ಯೋಧ ರಾಮ್ ಕಿಶನ್ ಗರ್ಹವಾಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ