ಲಕ್ನೋ : ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉತ್ತರ ಪ್ರದೇಶದ ಮೊರಾಬಾದ್ನಲ್ಲಿ ಪಾಕಿಸ್ತಾನಿ ಮಹಿಳೆಯ ಹೆಸರು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಪಾಕಿಸ್ತಾನಿ ಮಹಿಳೆ ಸಾಬಾ ಪರ್ವೀನ್ ಎಂಬಾಕೆ 2005ರಲ್ಲಿ ಅಹ್ಮದ್ ಎಂಬಾತನನ್ನು ವಿವಾಹವಾಗಿದ್ದಳು. ಅದಾದ ಬಳಿಕ ಆಕೆ ಮೊರಾಬಾದ್ನಲ್ಲಿ ಪಾಕ್ಬರಾ ನಗರ ಪಂಚಾಯತ್ ಪ್ರದೇಶದಲ್ಲಿ ನೆಲೆಸಿದ್ದರು. ಆದರೆ ಆಕೆ ಭಾರತದಲ್ಲಿ ನೆಲೆಸಲು ದೀರ್ಘಾವಧಿ ವೀಸಾವನ್ನು ಪಡೆದಿದ್ದಳು.
ಈ ಹಿನ್ನೆಲೆಯಲ್ಲಿ ಅವಳಿಗೆ ಮತದಾನವನ್ನು ಮಾಡುವ ಹಕ್ಕಿಲ್ಲ. ಆದರೂ ಇವರನ್ನು ಮೊರಾಬಾದ್ನ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿರುವ ವಿಷಯ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮತದಾರರ ಪಟ್ಟಿಯ ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 2017ರಲ್ಲಿ ನಗರ ಪಂಚಾಯಿತಿ ಚುನಾವಣೆ ನಡೆದಾಗ ಆಕೆಯ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿತ್ತು. ಆದರೆ, ನಿಯಮಗಳ ಪ್ರಕಾರ ಆಕೆಯ ಹೆಸರನ್ನು ಅದರಲ್ಲಿ ಸೇರಿಸಲು ಸಾಧ್ಯವಿರಲಿಲ್ಲ.