Webdunia - Bharat's app for daily news and videos

Install App

Pahalgam Terror Attack: ಪ್ರೀತಿಗಾಗಿ ಪಾಕ್ ಬಿಟ್ಟು ಬಂದ ಸೀಮಾ ಹೈದರ್‌ ಕೂಡಾ 48 ಗಂಟೆಯಲ್ಲಿ ಭಾರತ ಬಿಟ್ಟು ಹೋಗಬೇಕಾ

Sampriya
ಗುರುವಾರ, 24 ಏಪ್ರಿಲ್ 2025 (16:47 IST)
Photo Credit X
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಳು 48 ಗಂಟೆಗಳ ಸಮಯವನ್ನು ಭಾರತ ನೀಡಿದೆ.

ಇದೀಗ ಈ ನಿಯಮ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿದ ಸೀಮಾ ಹೈದರ್‌ಗೂ ಅನ್ವಯವಾಗುತ್ತಾ ಎಂಬ ಚರ್ಚೆ ಶುರುವಾಗಿದೆ.

ತಾನೂ ಪ್ರೀತಿಸಿದ ಭಾರತದ ಯುವಕನಿಗಾಗಿ ತಮ್ಮ ಮೊದಲ ಪತಿಯನ್ನು ಬಿಟ್ಟು ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಿದ ಸೀಮಾ ಹೈದರ್‌ ಈಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸೀಮಾ ಹೈದರ್ ಅವರ ಪೌರತ್ವ ಅರ್ಜಿಯನ್ನು ಅನುಮೋದಿಸಲಾಗಿಲ್ಲ ಮತ್ತು ಭಾರತದಲ್ಲಿ ಅವರ ಕಾನೂನು ಸ್ಥಾನಮಾನವು ವಿವಾದಾಸ್ಪದವಾಗಿದೆ.

ಇದಿಗ ಭಯೋತ್ಪಾದಕ ದಾಳಿಯ ನಂತರ ಭಾರತ ಸರ್ಕಾರದ ನಿಯಮದಂತೆ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಕೂಡ ಭಾರತವನ್ನು ತೊರೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆಯೇ ಎಂಬ ಚರ್ಚೆ ಜೋರಾಗಿ ಸುದ್ದಿಯಾಗುತ್ತಿದೆ.

ಸೀಮಾ ಹೈದರ್ ಯಾರು?

ಸೀಮಾ ಹೈದರ್ ಪಾಕಿಸ್ತಾನಿ ಮಹಿಳೆಯಾಗಿದ್ದು, ಎರಡು ವರ್ಷಗಳ ಹಿಂದೆ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾಳೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ನಿಂದ ಬಂದಿರುವ 32 ವರ್ಷ ವಯಸ್ಸಿನ ಈಕೆ ತನ್ನ ಮಕ್ಕಳನ್ನು ಕರೆದುಕೊಂಡು ಮೇ 2023 ರಲ್ಲಿ ಕರಾಚಿಯಲ್ಲಿರುವ ಮನೆಯಿಂದ ನೇಪಾಳದ ಮೂಲಕ ಭಾರತಕ್ಕೆ ಪ್ರಯಾಣ ಬೆಳೆಸಿದರು.

2019ರಲ್ಲಿ ಆನ್‌ಲೈನ್ ಮೂಲಕ ಭಾರತದ ಸಚಿನ್ ಜತೆ ಸಂಪರ್ಕವಾಗಿ ನಂತರ ಇವರಿಬ್ಬರ ಮಧ್ಯೆ ಪ್ರೇಮ ಬೆಳೆಯಿತು. ಅಕ್ರಮವಾಗಿ ಭಾರತಕ್ಕೆ ತನ್ನ ನಾಲ್ವರು ಮಕ್ಕಳೊಂದಿಗೆ ಬಂದ ಸೀಮಾ ನಂತರ ಸಚಿನ್ ಜತೆ ಎರಡನೇ ಮದುವೆಯಾದಳು.  ಸೀಮಾ ಹೈದರ್ ತನ್ನ ಪಾಕಿಸ್ತಾನಿ ಪತಿ ಗುಲಾಮ್ ಹೈದರ್‌ನಿಂದ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ.

ಸೀಮಾ ಹೈದರ್ ಮತ್ತು ಸಚಿನ್ ಮೀನಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮೊದಲು ಜುಲೈ 2023 ರಲ್ಲಿ ಬಂಧಿಸಲಾಯಿತು. ಸೀಮಾ ಹೈದರ್ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪ  ಹಾಗೂ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಮೀನಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಚಿನ್‌ನನ್ನು ಮದುವೆಯಾದ ನಂತರ ಸೀಮಾ ಹಿಂದೂ ಧರ್ಮವನ್ನು ಸ್ವೀಕರಿಸಿರುವುದಾಗಿ ಹೇಳಿಕೊಂಡಿದ್ದಳು.

ಈ ವರ್ಷದ ಮಾರ್ಚ್‌ನಲ್ಲಿ ಸೀಮಾ ಹೈದರ್ ಮತ್ತು ಸಚಿನ್ ಮೀನಾ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

India Pakistan: ಯಶಸ್ವಿಯಾಗಿ ಪಾಕ್‌ನ 600 ಡ್ರೋನ್‌ಗಳನ್ನು ಉರುಳಿಸಿದ ಭಾರತದ ವಾಯುಪಡೆ

ಉತ್ತರಪ್ರದೇಶ: ಕೂದಲು ಕಸಿ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಎಂಜಿನಿಯರ್‌ಗಳು

ಲಿಂಗಸುಗೂರು: ಜಾಮೀನು ವಿಚಾರಕ್ಕೆ ವಿಷ ಕುಡಿಸಿ ವ್ಯಕ್ತಿಯ ಕೊಲೆ, 10ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ

ಮುಂದಿನ ಸುದ್ದಿ
Show comments