ಜಮ್ಮು ಕಾಶ್ಮೀರ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಿನ್ನೆ ತಡರಾತ್ರಿ ಕೇವಲ 20 ನಿಮಿಷದಲ್ಲಿ 9 ಕಡೆ ದಾಳಿ ನಡೆಸಿ ಬಂದಿತ್ತು. ಈ ದಾಳಿ ಮಾಡುವಾಗ ಭಾರತೀಯ ಸೇನೆಯ ಟಾರ್ಗೆಟ್ ಇದ್ದಿದ್ದೂ ಅದೇ, ಆಗಿದ್ದೂ ಅದುವೇ.
ಭಾರತೀಯ ವಾಯು ಸೇನೆಯ ಅತ್ಯಾಧುನಿಕ ಯುದ್ಧ ವಿಮಾನಗಳು ಪಾಕಿಸ್ತಾನದೊಳಗೆ ನುಗ್ಗಿ ಹೊಡೆದಿತ್ತು. ಈ ದಾಳಿಗೆ ಭಾರತ ಸಾಕಷ್ಟು ಯೋಜನೆ ಹಾಕಿಕೊಂಡಿತ್ತು. ಪಹಲ್ಗಾಮ್ ಉಗ್ರ ದಾಳಿಯಾದಾಗಿನಿಂದಲೂ ಭಾರತೀಯ ಸೇನೆ ಕಾರ್ಯಾಚರಣೆ ಶುರು ಮಾಡಿತ್ತು.
ಉಗ್ರರ ಅಡಗುದಾಣಗಳು ಯಾವುವು ಎಂದು ಗುರುತು ಹಾಕಿಕೊಂಡಿತ್ತು. ಅದಕ್ಕೆ ತಕ್ಕಂತೆ ಉಗ್ರರಿಗೆ ತರಬೇತಿ ನೀಡುತ್ತಿದ್ದ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೈಬಾ ಸಂಘಟನೆಯ ಪ್ರಧಾನ ಕಚೇರಿಯನ್ನು ಧ್ವಂಸ ಮಾಡಲಾಗಿದೆ.
ಭಾರತೀಯ ಸೇನೆ ಈಗ ಧ್ವಂಸ ಮಾಡಿರುವ ನೆಲೆಗಳು ಇಡೀ ವಿಶ್ವದಲ್ಲೇ ಉಗ್ರವಾದ ಹರಡಲು ಕಾರಣವಾಗಿದ್ದ ಉಗ್ರಗಾಮಿಗಳ ತರಬೇತಿ ಕೇಂದ್ರಗಳಾಗಿವೆ. ಭಾರತದ ಟಾರ್ಗೆಟ್ ಕೂಡಾ ಇದೇ ಆಗಿತ್ತು. ಹೀಗಾಗಿ ನಾಗರಿಕರು ಮತ್ತು ಪಾಕಿಸ್ತಾನ ಸೇನೆಯನ್ನು ಟಾರ್ಗೆಟ್ ಮಾಡದೇ ಉಗ್ರರನ್ನು ಟಾರ್ಗೆಟ್ ಮಾಡಿ ಹೊಡೆದುರುಳಿಸಿದೆ.