Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಧ್ಯಪ್ರದೇಶದಲ್ಲಿ ಒಮಿಕ್ರಾನ್ ಪ್ರಕರಣ ಪತ್ತೆ

ಮಧ್ಯಪ್ರದೇಶದಲ್ಲಿ ಒಮಿಕ್ರಾನ್ ಪ್ರಕರಣ ಪತ್ತೆ
ಮಧ್ಯಪ್ರದೇಶ , ಭಾನುವಾರ, 26 ಡಿಸೆಂಬರ್ 2021 (17:27 IST)
ಇಂದು ಬೆಳಿಗ್ಗೆ ಸರ್ಕಾರವು ಭಾರತದಲ್ಲಿ 415 ಓಮಿಕ್ರಾನ್ ಪ್ರಕರಣಗಳಿವೆ ಎಂದು ಹೇಳಿದೆ. ಇದು ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದ ಪ್ರಕರಣಗಳನ್ನು ಒಳಗೊಂಡಿಲ್ಲ.
 
ಮಹಾರಾಷ್ಟ್ರದಲ್ಲಿ 108, ದೆಹಲಿಯಲ್ಲಿ 79 ಪ್ರಕರಣಗಳಿವೆ. “ಜನವರಿ 10, 2022 ರಿಂದ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಕೊವಿಡ್ ಲಸಿಕೆಯ ಮ ಮುಂಜಾಗ್ರತಾ ಡೋಸ್ ನೀಡುವುದನ್ನು ಪ್ರಾರಂಭಿಸಲಾಗುವುದು ಎಂದು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶನಿವಾರದಂದು ಸರ್ಕಾರವು 10 ರಾಜ್ಯಗಳಿಗೆ ವೈದ್ಯಕೀಯ ತಜ್ಞರ ತಂಡಗಳನ್ನು ಕಳುಹಿಸುವುದಾಗಿ ಹೇಳಿದೆ “ಅವುಗಳು ಹೆಚ್ಚುತ್ತಿರುವ ಒಮಿಕ್ರಾನ್ ಮತ್ತು ಕೊವಿಡ್ ಪ್ರಕರಣಗಳು ಅಥವಾ ನಿಧಾನವಾದ ವ್ಯಾಕ್ಸಿನೇಷನ್ ವೇಗವನ್ನು ವರದಿ ಮಾಡುತ್ತಿವೆ”.

ಆ ಪಟ್ಟಿಯಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ಇವೆ. ಎರಡೂ ರಾಜ್ಯಗಳು ಫೆಬ್ರವರಿ-ಮಾರ್ಚ್‌ನಲ್ಲಿ ಚುನಾವಣೆಗಳನ್ನು ನಡೆಸಲಿವೆ.

ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದಾಗಿನಿಂದ ಒಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ಹೆಚ್ಚು ವೇಗದಲ್ಲಿ ಹರಡಿತು ಮತ್ತು ಈಗ 100 ಕ್ಕೂ ಹೆಚ್ಚು ದೇಶಗಳಲ್ಲಿ ಈ ರೂಪಾಂತರಿ ವ್ಯಾಪಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ