ದೇಶದ ಅತ್ಯಂತ ಶ್ರೀಮಂತ ದೈವ ತಿರುಪತಿ ತಿಮ್ಮಪ್ಪನಿಗೆ ಅನಿವಾಸಿ ಭಾರತೀಯನೊಬ್ಬ ಬಂಗಾರದ ನಾಣ್ಯಗಳ ಹಾರವನ್ನ ಸಮರ್ಪಿಸಿದ್ದಾನೆ. `ಸಹಸ್ರ ನಾಮ ಕಸುಲ ಹಾರಂ’ ಎಂದು ಇದನ್ನ ಕರೆಯಲಾಗಿದೆ.
ಈ ಹಾರದಲ್ಲಿ ಬರೋಬ್ಬರಿ 1008 ಬಂಗಾರದ ನಾಣ್ಯಗಳಿದ್ದು, 8 ಕೋಟಿ ಮೌಲ್ಯದ ಈ ಹಾರದಲ್ಲಿ 28 ಕೆ.ಜಿ ಬಂಗಾರವಿದೆ. ಅನಿವಾಸಿ ಭಾರತೀಯ ಮಂತೆನಾ ರಾಮಲಿಂಗರಾಜು ಶನಿವಾರ ಈ ಹಾರವನ್ನ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಮ್ಮುಖದಲ್ಲಿ ದೇಗುಲಕ್ಕೆ ಸಮರ್ಪಿಸಿದರು.
ವಾರ್ಷಿಕ ಬ್ರಹ್ಮೋತ್ಸವದ ಮೊದಲ ದಿನ ಸಂಪ್ರದಾಯದಂತೆ ಸಿಎಂ ಚಂದ್ರಬಾಬು ನಾಯ್ತು ಸರ್ಕಾರದ ಪರವಾಗಿ ತಿಮ್ಮಪ್ಪನಿಗೆ ರೇಷ್ಮೆ ವಸ್ತ್ರ ಸಮರ್ಪಿಸಿದರು. ಬಳಿಕ ಅವರ ಸಮ್ಮುಖದಲ್ಲೇ ರಾಮಲಿಂಗರಾಜು ಬಂಗಾರದ ಹಾರ ಸಮರ್ಪಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ