ಮಹಾರಾಷ್ಟ್ರದಲ್ಲಿ ರೇಪ್, ರೇಪ್ ಮತ್ತು ಹತ್ಯೆ ಹಾಗೂ ಡಕಾಯಿತಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಕಾಯಂ ಪೆರೋಲ್‌ಗೆ ಅರ್ಹರಲ್ಲ ಎಂದು ಬಂಧೀಖಾನೆ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಮುಂಬೈನಲ್ಲಿ ಸಂವೇದನಾತ್ಮಕ ಹತ್ಯೆಯ ಪ್ರಕರಣದಲ್ಲಿ ಕೈದಿಯೊಬ್ಬ ಪೆರೋಲ್ ಜಂಪ್ ಮಾಡಿದ ಹಿನ್ನೆಲೆಯಲ್ಲಿ ಈ ತಿದ್ದುಪಡಿಗಳನ್ನು ಮಾಡಲಾಗಿದೆ.
ರೇಪ್, ರೇಪ್ ಮತ್ತು ಹತ್ಯೆ, ಮಾದಕ ವಸ್ತು ಕಳ್ಳಸಾಗಣೆ ಮತ್ತು ಡಕಾಯಿತಿ ಮುಂತಾದ ಆರೋಪಗಳಿಗೆ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಕಾಯಂ ಪೆರೋಲ್‌ಗೆ ಅರ್ಹರಲ್ಲ ಎಂದು ಬಂಧೀಖಾನೆ ಕೈಪಿಡಿಯಲ್ಲಿ ಸೂಚಿಸಿದ ತಿದ್ದುಪಡಿಗಳು ತಿಳಿಸಿವೆ.
ಮುಂಬೈ ಮೂಲದ ವಕೀಲ ಪಲ್ಲವಿ ಪುರ್‌ಕಾಯಸ್ತ ಅವರ ಹತ್ಯೆ ಪ್ರಕರಣದಲ್ಲಿ ನಾಸಿಕ್ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜದ್ ಮೊಗುಲ್ ಪೆರೋಲ್ ಜಂಪ್ ಮಾಡಿದಾಗಿನಿಂದ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೆರೋಲ್ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.