ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮೊನ್ನೆಯಷ್ಟೇ ಮೈತ್ರಿ ಮುರಿದುಕೊಂಡ ಟಿಡಿಪಿ ಮತ್ತು ವೈಎಸ್ ಆರ್ ಕಾಂಗ್ರೆಸ್ ನಿರ್ಧರಿಸಿದೆ.
ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡದ ಬೇಸರದಲ್ಲಿ ಟಿಡಿಪಿ ಕೇಂದ್ರದೊಂದಿಗೆ ಮೈತ್ರಿ ಮುರಿದುಕೊಂಡಿತ್ತು. ಹೀಗಾಗಿ ಇಂದು ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಟಿಡಿಪಿ ಮತ್ತು ವೈಎಸ್ ಆರ್ ಕಾಂಗ್ರೆಸ್ ಲೋಕಸಭೆ ಕಾರ್ಯದರ್ಶಿಗೆ ಪತ್ರ ಬರೆದಿವೆ.
ಹೀಗಾಗಿ ಎರಡೂ ಪಕ್ಷಗಳ ಲೋಕಸಭೆಯ ಪ್ರತಿಪಕ್ಷಗಳ ಬೆಂಬಲ ಕೋರುತ್ತಿವೆ. 50 ಸಂಸದರ ಬೆಂಬಲವಿದ್ದರಷ್ಟೇ ಅವಿಶ್ವಾಸ ನಿರ್ಣಯ ಮಂಡಿಸಲು ಸಾಧ್ಯವಿಲ್ಲ. ಆದರೆ ಬಿಜೆಪಿ ಸಂಖ್ಯೆ ಬಹುತಕ್ಕೆ ಬೇಕಾಗಿರುವಷ್ಟು ಇರುವ ಕಾರಣ ಅವಿಶ್ವಾಸ ನಿರ್ಣಯದಿಂದ ಹೆಚ್ಚಿನ ಪ್ರಭಾವವಾಗದು ಎಂದು ನಂಬಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ