Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಿಕ್ಷೆ ಬೇಡಿದರೂ ಊಟ ಸಿಕ್ಕಿಲ್ಲ! ಮುಂದೇನಾಯ್ತು?

ಭಿಕ್ಷೆ ಬೇಡಿದರೂ ಊಟ ಸಿಕ್ಕಿಲ್ಲ! ಮುಂದೇನಾಯ್ತು?
ಭೋಪಾಲ್ , ಶುಕ್ರವಾರ, 14 ಜನವರಿ 2022 (16:22 IST)
ಭೋಪಾಲ್ : ಭಿಕ್ಷೆ ಬೇಡಿದರೂ ಊಟ ಸಿಗಲಿಲ್ಲ, ಮನನೊಂದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರಿಂಕಿ (22) ಮೃತಳಾಗಿದ್ದಾಳೆ. ಸುಮಾರು ಎರಡೂವರೆ ವರ್ಷದ ಹಿಂದೆ ರಾಜ್ಕುಮಾರ್ ಎನ್ನುವನನ್ನು ಈಕೆ ವಿವಾಹವಾಗಿದ್ದರು. ದಂಪತಿಗೆ 17 ತಿಂಗಳ ಮಗು  ಇದೆ.  ಪತಿ ರಾಜ್ಕುಮಾರ್ ಗುರುವಾರ ಪಡಿತರ ತೆಗೆದುಕೊಂಡು ಬರಲು ಹೋಗಿದ್ದ ವೇಳೆ ರಿಂಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಒಂದು ವಾರದಿಂದ ಕುಟುಂಬಕ್ಕೆ ಊಟಕ್ಕೆ ಸಮಸ್ಯೆಯಾಗುತ್ತಿತ್ತು. ಯಾರೂ ಕೆಲಸವನ್ನು ಕೊಡುತ್ತಿರಲಿಲ್ಲ. ಇದರಿಂದಾಗಿಯೇ ರಿಂಕಿ ಭಿಕ್ಷಾಟನೆಗೆ ತೆರಳುತ್ತಿದ್ದಳು. ಹಲವು ದಿನಗಳಿಂದ ಸರಿಯಾದ ಊಟ ಸಿಕ್ಕಿರಲಿಲ್ಲ. ಅರ್ಧ ರೊಟ್ಟಿಯನ್ನು ಹಂಚಿ ತಿನ್ನುತ್ತಿದ್ದೆವು.

 
ನಮ್ಮ ಕುಟುಂಬಕ್ಕೆ ರೇಷನ್ ಆಪ್ಕೆ ದ್ವಾರಾ ಯೋಜನೆಯ ಪಡಿತರ ಚೀಟಿಯೂ ಇತ್ತು. ಹಲವು ಬಾರಿ ಪಡಿತರ ಅಂಗಡಿಗೆ ತೆರಳಿದರೂ ನನಗೆ ಪಡಿತರ ಸಿಕ್ಕಿರಲಿಲ್ಲ. ಇದರಿಂದಾಗಿ ಕುಟುಂಬ ಉಪವಾಸ ಬೀಳುವಂತಾಗಿತ್ತು. ಪಡಿತರ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ನನ್ನ ಪತ್ನಿ ಪ್ರಾಣ ಬಿಟ್ಟಿದ್ದಾಳೆ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕೇಂದ್ರ ಸರ್ಕಾರದಿಂದ ಜಾಗತಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ: ಒಂದು ಕೋಟಿ ಜನರ ಭಾಗಿ