Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಭೋಪಾಲ್ : ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳ ವಿರುದ್ಧ ಪತಿ ಸಿನಿಮಾ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾನೆ.
ಪ್ರಕರಣ ಬಹಿರಂಗಗೊಂಡ ಬಳಿಕ ಪತಿಯನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಸಾಮೂಹಿಕ ಅತ್ಯಾಚಾರ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗಳ ಮೇಲೆ ಈ ಹಿಂದೆ ಒಮ್ಮೆ ದಾಳಿ ಮಾಡಿದ್ದನು.
ಆದರೆ ಅಪರಾದಿಗಳು ಸಾಯದಿದ್ದಾಗ, ಆರು ತಿಂಗಳ ನಂತರ ದಾಳಿ ಮಾಡಿ ತನ್ನ ಸೇಡು ತೀರಿಸಿಕೊಂಡಿದ್ದಾನೆ. ಘಟನೆ ನಡೆದ ದಿನದಿಂದ ಗ್ರಾಮದ ವ್ಯಕ್ತಿಯೊಬ್ಬ ಕುಟುಂಬ ಸಮೇತ ನಾಪತ್ತೆಯಾಗಿದ್ದನು.
ಆತನ ಫೋನ್ ಟ್ರೇಸಿಂಗ್ ಮೂಲಕ ಪೊಲೀಸರು ಆತನನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆಗೆ ಒಳಗಾದ ಅವರು ಸಂಪೂರ್ಣ ಬಹಿರಂಗಪಡಿಸಿದಾಗ ಆಗ ಸತ್ಯ ಹೊರಗೆ ಬಂದಿದೆ.
1 ವರ್ಷದ ಹಿಂದೆ ನನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಹೀಗಾಗಿ ನಾನು ಅವರ ಮೇಲೆ ಸೆಡು ತೀರಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ನನ್ನ ಪ್ಲ್ಯಾನ್ ಸರಿಯಾಗಿ ಇರಲಿಲ್ಲ ಹೀಗಾಗಿ ಅವರು ಬದುಕಿ ಉಳಿದರು.