ಬಿಹಾರ : ಕಳೆದ ತಿಂಗಳಷ್ಟೇ ಐಎನ್‌ಡಿಐಎ ಒಕ್ಕೂಟವನ್ನು ತೊರೆದು ಹೊರಬಂದಿದ್ದ ನಿತೀಶ್ ಕುಮಾರ್, ಬಿಜೆಪಿ ಜೊತೆಗೆ ಕೈ ಜೋಡಿಸಿದ್ದರು. ಬಳಿಕ 9 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆರ್‌ಜೆಡಿ ಜೊತೆಗಿನ ಸಖ್ಯ ತೊರೆದು ಬಿಜೆಪಿ ಜೊತೆಗೆ ಮೈತ್ರಿ ಬೆಳೆಸಿಕೊಂಡಿರುವ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಇಂದು ಸದನದಲ್ಲಿ ತಮ್ಮ ವಿಶ್ವಾಸಮತವನ್ನು ಸಾಬೀತುಪಡಿಸಲಿದ್ದಾರೆ. ಇದಕ್ಕೂ ಮುನ್ನವೇ ಸ್ಪೀಕರ್ ಅವಧ್ ಬಿಹಾರಿ ಚೌದರಿ ಅವರನ್ನು ಸ್ಪೀಕರ್ ಸ್ಥಾನದಿಂದ ಕೆಳಗಿಳಿಸುವಂತೆ ಬಿಹಾರದ ಅಧಿವೇಶನದಲ್ಲಿ ನಿರ್ಣಯ ಮಂಡಿಸಲಾಗಿದೆ.
245 ಮಂದಿ ಶಾಸಕರಿರುವ ಬಿಹಾರದಲ್ಲಿ ಜೆಡಿಯು -45 ಶಾಸಕರನ್ನು ಹೊಂದಿದೆ. ಬಿಜೆಪಿ -79 ಹಾಗೂ ಹಿಂದೂಸ್ಥಾನಿ ಆವಮ್ ಮೋರ್ಚಾ (ಎಸ್) ನಾಲ್ಕು ಸ್ಥಾನಗಳನ್ನು ಹೊಂದಿದೆ. 115 ಮಂದಿಯ ಬಲವಿರುವ ಕಾಂಗ್ರೆಸ್ ಮತ್ತುಆರ್‌ಜೆಡಿ ವಿರುದ್ದ ಇಂದು ನಿತೀಶ್ ವಿಶ್ವಾಸಮತ ಸಾಬೀತುಪಡಿಸಲಿದ್ದಾರೆ.