ನಾಗ್ಪುರ : ವಿದೇಶದಿಂದ ರಸಗೊಬ್ಬರ ಆಮದು ಮಾಡಿಕೊಳ್ಳುವುದನ್ನು ಕಡಿಮೆಯಾಗಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಉತ್ತಮವಾದ ಸಲಹೆಯೊಂದನ್ನು ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,’ ಹೇಗೆ ಜೈವಿಕ ತ್ಯಾಜ್ಯಗಳನ್ನು ಬಳಸಿ ಇಂಧನವನ್ನು ಉತ್ಪಾದಿಸಲಾಗುತ್ತದೋ ಅದೇ ರೀತಿಯಾಗಿ ಮಾನವನ ಮೂತ್ರವನ್ನು ಬಳಸಿ ಜೈವಿಕ ಇಂಧನವನ್ನು ತಯಾರಿಸಬಹುದು. ಯೂರಿಯಾ ರಸಗೊಬ್ಬರವನ್ನು ತಯಾರಿಸಬಹುದು’ ಎಂದು ಸಲಹೆ ನೀಡಿದ್ದಾರೆ.
‘ಮೂತ್ರದಲ್ಲಿ ಒಂದು ವಿಶೇಷ ಶಕ್ತಿ ಇದ್ದು, ಸಂಗ್ರಹಿಸಿದರೆ ವ್ಯರ್ಥವಾಗುವುದನ್ನು ತಡೆಯಬಹುದು. ಆಗ ನಾವು ಯೂರಿಯಾವನ್ನು ಆಮದು ಮಾಡುವ ಪ್ರಶ್ನೆಯೇ ಉದ್ಘವಿಸುವುದಿಲ್ಲ. ತನ್ನ ಕಲ್ಪನೆಗಳು ಅದ್ಭುತವಾಗಿರುತ್ತದೆ, ಆದರೆ ಕೆಲವು ಜನಗಳು ಈ ಕಲ್ಪನೆಯನ್ನು ಜಾರಿಗೆ ತರಲು ಸಹಕಾರ ನೀಡುವುದಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.