ಲಕ್ನೋ : 14 ವರ್ಷದ ಹುಡುಗಿಯ ಮೇಲೆ ಮಾನಭಂಗ ಎಸಗಿ ಗರ್ಭಿಣಿ ಮಾಡಿದ 16 ವರ್ಷದ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ.
ಹುಡುಗಿಯ ತಾಯಿ ಮೃತಪಟ್ಟಿದ್ದು, ತಂದೆ ಮದ್ಯ ವ್ಯಸನಿಯಾಗಿದ್ದಾನೆ. ಈ ಹಿನ್ನಲೆಯಲ್ಲಿ ಆಕೆ ಅಜ್ಜಿಯ ಜೊತೆ ವಾಸವಾಗಿದ್ದಳು. ನೆರೆಮನೆಯಾತ ಆಕೆಯನ್ನು 1 ವರ್ಷದಿಂದ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇದರಿಂದ ಆಕೆ ಗರ್ಭ ಧರಿಸಿದ್ದಾಳೆ. ಬಳಿಕ ಹುಡುಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಚಾರ ತಿಳಿದ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.