Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಸುಕ್ಮಾ: ಸುಕ್ಮಾದಲ್ಲಿ 25 ಸಿಆರ್ ಪಿಎಫ್ ಯೋಧರ ಮಾರಣ ಹೋಮ ನಡೆಸುವಾಗ ಯೋಧರು ಊಟ ಮಾಡುತ್ತಿದ್ದರು. ಹಾಗಾಗಿ ಹೆಚ್ಚಿ ಪ್ರತಿರೋಧ ತೋರಲಾಗಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಮೊನ್ನೆಯಷ್ಟೇ ರಸ್ತೆ ತೆರವುಗೊಳಿಸುವ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಯೋಧರ ಮೇಲೆ ಯದ್ವಾ ತದ್ವಾ ದಾಳಿ ನಡೆಸಿ 25 ಸಿಆರ್ ಪಿಎಫ್ ಯೋಧರ ಸಾವಿಗೆ ಕಾರಣರಾಗಿದ್ದರು. 36 ಯೋಧರ ಒಂದು ತಂಡದಲ್ಲಿ ಬಹುತೇಕರು ಊಟ ಮಾಡಲು ಕುಳಿತಿದ್ದರು.
ಈ ಸಂದರ್ಭದಲ್ಲಿ ಏಕಾ ಏಕಿ ನಕ್ಸಲರು ದಾಳಿ ನಡೆಸಿದಾಗ ಯೋಧರು ಗಲಿಬಿಲಿಗೊಂಡರು. ಕೆಲವರು ಆಗಷ್ಟೇ ಊಟ ಮುಗಿಸಿದ್ದರು. ಇನ್ನು ಕೆಲವರು ಊಟ ಮಾಡುತ್ತಿದ್ದರು ಎಂದು ಘಟನೆಯ ಸಂದರ್ಭದಲ್ಲಿದ್ದ ಯೋಧರೊಬ್ಬರು ವಿವರಿಸಿದ್ದಾರೆ.
ನಕ್ಸಲರು ದಾಳಿ ನಡೆಸಿ ಯೋಧರನ್ನು ಕೊಂದಿದ್ದಷ್ಟೇ ಅಲ್ಲ, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಕೈ ವಶ ಮಾಡಿಕೊಳ್ಳಲು ಯತ್ನಿಸಿದರು. ಬಹುಶಃ ಇದು ಕೂಡಾ ಅವರ ಮುಖ್ಯ ಉದ್ದೇಶವಾಗಿದ್ದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ