Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಷ್ಟ್ರ ರಾಜಧಾನಿಗೂ ನಂದಿನಿ ಘಮಲು: ಬಿಜೆಪಿಯ ಕಾಲೆಳೆದ ಕಾಂಗ್ರೆಸ್‌

Nandini

Sampriya

ಬೆಂಗಳೂರು , ಶನಿವಾರ, 24 ಆಗಸ್ಟ್ 2024 (17:05 IST)
Photo Courtesy X
ಬೆಂಗಳೂರು: ರಾಷ್ಟ್ರ ರಾಜಧಾನಿಗೆ ಅಕ್ಟೋಬರ್‌ನಿಂದ ಪ್ರತಿದಿನ 2.5 ಲಕ್ಷ ಲೀಟರ್ ನಂದಿನ ಹಾಲು ಪೂರೈಕೆ ಮಾಡಲು ಕರ್ನಾಟಕ ಹಾಲು ಮಹಾಮಂಡಲ ಸಜ್ಜಾಗಿದೆ.

ಈ ಸಂಬಂದ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡವು ನವದೆಹಲಿಯಲ್ಲಿ 70ವಿತರಕರ ಜತೆ ಸಭೆ ನಡೆಸಿ, ಸಿದ್ಧತೆಯನ್ನು ಮಾಡಿಕೊಂಡಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ದೇಶದ ರಾಜಧಾನಿಗೂ ನಂದಿನಿಯ ಸಾಮ್ರಾಜ್ಯ ವಿಸ್ತರಿಸಲು ಮುಂದಾಗಿದೆ ನಮ್ಮ ಸರ್ಕಾರ.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಎಂಎಫ್ ನ್ನು ಅಮುಲ್ ಸಂಸ್ಥೆಯೊಂದಿಗೆ ವಿಲೀನಗೊಳಿಸಿ ನಂದಿನಿಯ ಆಸ್ತಿತ್ವವನ್ನೇ ಮುಗಿಸಿ ಹಾಕುವ ಹುನ್ನಾರ ನಡೆಸಲಾಗಿತ್ತು.

ಆದರೆ ನಮ್ಮ ಸರ್ಕಾರದಲ್ಲಿ ನಂದಿನಿ ದೆಹಲಿಯಲ್ಲಿನ ಅಮುಲ್ ಮಾರುಕಟ್ಟೆಗೆ ಸ್ಪರ್ಧೆಯೊಡ್ದಲು ಸಜ್ಜಾಗಿದೆ. ದೇಶೀಯವಾಗಿ ಮಾತ್ರವಲ್ಲ ಜಾಗತಿಕವಾಗಿಯೂ ನಂದಿನಿಯನ್ನು ಉತ್ತಮ ಬ್ರ್ಯಾಂಡ್ ಆಗಿ ರೂಪಿಸಲು ಬದ್ಧತೆ ಹೊಂದಿದ್ದೇವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಿಂದ ಪುಣೆಗೆ ತೆರಳುತ್ತಿದ್ದ ಹೆಲಿಕಾಪ್ಟರ್‌ ಪತನ, ಪೈಲಟ್ ಸ್ಥಿತಿ ಚಿಂತಾಜನಕ