Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದಲ್ಲಿ ಮುಸ್ಲಿಮರ ಅಗತ್ಯವಿಲ್ಲ: ಬಿಜೆಪಿ ಸಂಸದ ವಿನಯ್ ಕಟಿಯಾರ್

ಭಾರತದಲ್ಲಿ ಮುಸ್ಲಿಮರ ಅಗತ್ಯವಿಲ್ಲ: ಬಿಜೆಪಿ ಸಂಸದ ವಿನಯ್ ಕಟಿಯಾರ್

ರಾಮಕೃಷ್ಣ ಪುರಾಣಿಕ

ಬೆಂಗಳೂರು , ಗುರುವಾರ, 8 ಫೆಬ್ರವರಿ 2018 (16:08 IST)
ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸತ್ ಸದಸ್ಯ ವಿನಯ್ ಕಟಿಯಾರ್ ಮುಸ್ಲಿಮರನ್ನು ಭಾರತದಲ್ಲಿ ವಾಸಿಸಲು ಅನುಮತಿಸಬಾರದು ಎಂದು ಹೇಳುವ ಮೂಲಕ ಘರ್ಜಿಸಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆಯ ಪ್ರಕಾರ, ಮುಸ್ಲಿಮರು ತಮ್ಮ ಜನಸಂಖ್ಯೆಯ ಆಧಾರದ ಮೇಲೆ ದೇಶವನ್ನು ವಿಭಜಿಸಿದರೆ ಅವರು ಭಾರತದಲ್ಲಿ ವಾಸಿಸುವುದು ಅಗತ್ಯವಿಲ್ಲ ಎಂದು ಕಟಿಯಾರ್ ಗುಡುಗಿದ್ದಾರೆ.
“ಮುಸ್ಲಿಮರು ಈ ದೇಶದಲ್ಲಿ ಇರಬಾರದು, ಅವರು ದೇಶವನ್ನು ಜನಸಂಖ್ಯೆಯ ಆಧಾರದ ಮೇಲೆ ವಿಭಜಿಸುತ್ತಿದ್ದಾರೆ ಅಂತಹವರು ಈ ದೇಶದಲ್ಲಿ ಉಳಿದುಕೊಳ್ಳುವಂತಹ ಅವಶ್ಯಕತೆ ಏನಿದೆ?” ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
 
ಮುಂದುವರಿದಂತೆ ಅವರು, “ಅವರಿಗೆ ಪ್ರತ್ಯೇಕವಾಗಿ ಭೂಭಾಗವನ್ನು ನೀಡಲಾಗಿತ್ತು, ಅವರು ಬಾಂಗ್ಲಾದೇಶಕ್ಕೊ ಅಥವಾ ಪಾಕಿಸ್ತಾನಕ್ಕೊ ಹೋಗಬೇಕಿತ್ತು, ಅವರು ಇಲ್ಲಿ ಯಾವ ಕಾರಣಕ್ಕೆ ಉಳಿದುಕೊಂಡಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
 
ಭಾರತೀಯ ಮುಸ್ಲಿಮರನ್ನು "ಪಾಕಿಸ್ತಾನಿ" ಎಂದು ಕರೆಯುವವರನ್ನು ಶಿಕ್ಷಿಸಲು ಕಾನೂನು ರೂಪಿಸುವಂತೆ ಬಯಸಿದ್ದ ಎಐಎಮ್ಐಎಮ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಬೇಡಿಕೆಗೆ ಪ್ರತಿಕ್ರಿಯಿಸುತ್ತಾ, ಈ ಕಾನೂನಿನ ಬದಲಿಗೆ ಭಾರತದ ಪ್ರಾಂತ್ಯದಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸುವವರಿಗೆ ದಂಡ ವಿಧಿಸುವ ಮಸೂದೆ ಇರಬೇಕು ಎಂದು ಕಟಿಯಾರ್ ಹೇಳಿದರು.
 
“ವಂದೇ ಮಾತರಂ ಅನ್ನು ಗೌರವಿಸದ, ರಾಷ್ಟ್ರೀಯ ಧ್ವಜವನ್ನು ಅವಮಾನಿಸುವವರಿಗೆ ಶಿಕ್ಷೆಯನ್ನು ನೀಡುವ ಒಂದು ಮಸೂದೆ ಇರಬೇಕು,” ಎಂದು ಬಿಜೆಪಿ ನಾಯಕ ಹೇಳಿದರು. “ಪಾಕಿಸ್ತಾನದ ಧ್ವಜವನ್ನು ಹಾರಿಸುವವರನ್ನು ಶಿಕ್ಷಿಸಬೇಕು,” ಎಂದು ಅವರು ಹೇಳಿದರು.
 
ಆಲ್ ಇಂಡಿಯಾ ಮಜ್ಲಿಸ್-ಇ-ಇಥೆಹಾದುಲ್ ಮುಸ್ಲಿಮೀನ್ (ಎಐಎಮ್ಐಎಮ್) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮಂಗಳವಾರದಂದು "ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿ ಎಂದು ಕರೆಯುವವರನ್ನು ಜೈಲಿಗಟ್ಟಬೇಕು" ಎಂಬ ಹೇಳಿಕೆಯನ್ನು ನೀಡಿದ ಒಂದು ದಿನದ ನಂತರ ಬಿಜೆಪಿ ಸಂಸದರು ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
 
ಓವೈಸಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ, ಇಂತಹ ಹೇಳಿಕೆಗಳನ್ನು ಮಾಡುವ ಜನರನ್ನು ಶಿಕ್ಷಿಸಲು ಕಾನೂನನ್ನು ತರುವಂತೆ, ಅಂತಹ ಹೇಳಿಕೆಗಳನ್ನು ಮಾಡುವವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ನೀಡುವಂತೆ ಅವರು ಸರ್ಕಾರವನ್ನು ಕೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರುಕಟ್ಟೆಗ್ಗೆ ಲಗ್ಗೆ ಇಟ್ಟಿದೆ ಹೊಸ ಟಿವಿಎಸ್ NTORQ 125 ಸ್ಕೂಟರ್