Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಮುರಿದ ದಾಖಲೆಗಳು ಏನೇನು ಗೊತ್ತಾ?

ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಮುರಿದ ದಾಖಲೆಗಳು ಏನೇನು ಗೊತ್ತಾ?
ಕೇಪ್ ಟೌನ್ , ಗುರುವಾರ, 8 ಫೆಬ್ರವರಿ 2018 (09:05 IST)
ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯವನ್ನ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ಮತ್ತು ಕೆಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
 

ಅತಿಥೇಯ ತಂಡವನ್ನು 124 ರನ್ ಗಳಿಂದ ಸೋಲಿಸಿದ ಟೀಂ ಇಂಡಿಯಾ ಈ ಮೂಲಕ ದ.ಆಫ್ರಿಕಾದಲ್ಲಿ ಅದೇ ತಂಡವನ್ನು ಗರಿಷ್ಠ ರನ್ ಗಳ ಅಂತರದ ಆಧಾರದಲ್ಲಿ ಸೋಲಿಸಿದ ದಾಖಲೆ ಮಾಡಿತು. ಆಫ್ರಿಕಾ ಇದುವರೆಗೆ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ 0-3 ರಿಂದ ಹಿನ್ನಡೆ ಅನುಭವಿಸಿದ ಉದಾಹರಣೆಯೇ ಇರಲಿಲ್ಲ.

ಮೂರು ಏಕದಿನ ಪಂದ್ಯಗಳಿಂದ ಚಾಹಲ್-ಯಾದವ್ ಸ್ಪಿನ್ ಜೋಡಿ 21 ವಿಕೆಟ್ ಕಬಳಿಸಿದ್ದು ದಾಖಲೆಯಾಗಿದೆ. 34 ಏಕದಿನ ಶತಕ ಗಳಿಸಿದ ವಿರಾಟ್ ಕೊಹ್ಲಿ ಈ ಮೂಲಕ ನಾಯಕನಾಗಿ ಅತೀ ಹೆಚ್ಚು ಶತಕ ಗಳಿಸಿದ ಸೌರವ್ ಗಂಗೂಲಿ ದಾಖಲೆಯನ್ನು ಮೀರಿದ್ದಾರೆ. ಅಷ್ಟೇ ಅಲ್ಲದೆ, ಕಪಿಲ್ ದೇವ್ ನಂತರ ವಿದೇಶದಲ್ಲಿ ಗರಿಷ್ಠ ರನ್ ಗಳಿಸಿದ ನಾಯಕ ಎಂಬ ದಾಖಲೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಏಕದಿನ ಗೆಲ್ಲಲು ಟೀಂ ಇಂಡಿಯಾಗೆ ನೆರವಾದ ಆ ಮೂರು ಮಂದಿ!