Select Your Language

Notifications

webdunia
webdunia
webdunia
webdunia

`ಮುನ್ನಾ ಭಾಯ್’ ಸಂಜಯ್ ದತ್ ಗೆ ಮತ್ತೆ ಸಂಕಷ್ಟ

Munna Bhai
ಉತ್ತರ ಪ್ರದೇಶ , ಗುರುವಾರ, 26 ಅಕ್ಟೋಬರ್ 2017 (17:52 IST)
ಉತ್ತರ ಪ್ರದೇಶ: ಬಾಲಿವುಡ್‌ ನಟ ಸಂಜಯ್‌ ದತ್‌ ಗೆ ಹೊಸ ಸಂಕಷ್ಟ ಎದುರಾಗಿದೆ. 2009ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಬಿಎಸ್‌ಪಿ ನಾಯಕಿ ಮಾಯಾವತಿಗೆ "ಜಾದೂ ಕೀ ಝಪ್ಪಿ' ಎಂದು ಹೇಳಿದ್ದ ಸಂಜಯ್‌ ದತ್‌ ಗೆ ಉತ್ತರ ಪ್ರದೇಶ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.

ಸಮಾಜವಾದಿ ಪಕ್ಷದ ಅಭ್ಯರ್ಥಿ ಪರ ಸಾರ್ವಜನಿಕ ಭಾಷಣದಲ್ಲಿ ಮಾಯಾವತಿಯನ್ನು ಹೀಗಳೆಯುತ್ತಾ ತನ್ನ ಜನಪ್ರಿಯ "ಜಾದೂ ಕೀ ಝಪ್ಪಿ' ಡೈಲಾಗ್ ಹೇಳುವ ಮೂಲಕ ನಟ ಸಂಜಯ್‌ ದತ್‌, ಭಾರೀ ದೊಡ್ಡ ಜನಸ್ತೋಮವನ್ನು ನಗೆಗಡಲಲ್ಲಿ ತೇಲಿಸಿದ್ದರು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೂ ನಾನು ಜಾದೂ ಕೀ ಝಪ್ಪಿ ನೀಡಬಯಸುತ್ತೇನೆ ಎಂದು ದತ್‌ ಹೇಳಿದ್ದರು.

ಕಾರ್ಯಕ್ರಮದ ವಿಡಿಯೋವನ್ನು ಜಿಲ್ಲಾಡಳಿತ ಚಿತ್ರೀಕರಿಸಿತ್ತು. ಇದರ ಆಧಾರದಲ್ಲಿ ದೂರು ದಾಖಲಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟರು ಆದೇಶಿಸಿದ್ದರು. ಮಾಸೋಲಿ ಪೊಲೀಸ್‌ ಠಾಣೆಯ ಪ್ರಭಾರಾಧಿಕಾರಿ ವಿನಯ್‌ ಮಿಶ್ರಾ, ಸಂಜಯ್‌ ದತ್‌ ವಿರುದ್ಧ ದೂರು ದಾಖಲಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಅರೆಸ್ಟ್ ವಾರಂಟ್