Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ತಿರುವನಂತಪುರ: ಹೆತ್ತ ತಾಯಿಯೊಬ್ಬಳು ತನ್ನನ್ನು ಚುಡಾಯಿಸಿದ ಕಾರಣಕ್ಕಾಗಿ ಮಗನನ್ನೇ ಕೊಂದು, ಸುಟ್ಟ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ.
14ರ ಹರೆಯದ ತನ್ನ ಮಗನೇ ತನ್ನನ್ನು ಚುಡಾಯಿಸಿದ್ದಕ್ಕೆ ಸಿಟ್ಟಾದ 45ರ ಹರೆಯದ ತಾಯಿ, ಮಗನನ್ನು ಕೊಂದಿದ್ದಾಳೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿ ಹತ್ಯೆಗೀಡಾದ್ದ ಜಿತು ಜಾಬ್ ದೇಹವು ಬಾಳೆ ತೋಟದಲ್ಲಿ ತುಂಡರಿಸಲ್ಪಟ್ಟು ಅರೆ ಸುಟ್ಟ ಸ್ಥಿತಿಯಲ್ಲಿತ್ತು. ಇದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪೋಲಿಸರು ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಿತು ಜಾಬ್ ತಾಯಿ ಜಯಮೋಳ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ