Publish Date: Fri, 06 Nov 2020 (09:39 IST)
Updated Date: Fri, 06 Nov 2020 (09:44 IST)
ನವದೆಹಲಿ : 60 ವರ್ಷದ ವ್ಯಕ್ತಿಯಿಂದ ಮಾನಭಂಗಕ್ಕೊಳಗಾಗಿ ಗರ್ಭ ಧರಿಸಿದ 16 ವರ್ಷದ ಹುಡುಗಿಯೊಬ್ಬಳು ತಾನು ಹೆತ್ತ ಮಗುವನ್ನು ಕಸದ ಬುಟ್ಟಿಗೆ ಎಸೆದು ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.
ಆರೋಪಿ ಹಾಗೂ ಸಂತ್ರಸ್ತೆ ಒಂದೇ ಪ್ರದೇಶದಲ್ಲಿ ವಾಸವಾಗಿದ್ದರು. ಆರೋಪಿ ಆಕೆಯ ಮೇಲೆ ಮಾನಭಂಗ ಎಸಗಿದ ಹಿನ್ನಲೆಯಲ್ಲಿ ಆಕೆ ಗರ್ಭ ಧರಿಸಿದ್ದಾಳೆ. ಬಳಿಕ ಅವಳು ಮನೆಯ ಟೆರೇಸ್ ಮೇಲೆ ಬೇರೆಯವರ ಸಹಾಯವಿಲ್ಲದೇ ಮಗುವಿಗೆ ಜನ್ಮ ನೀಡಿ ಅದನ್ನು ಕಸದ ಬುಟ್ಟಿಗೆ ಎಸೆದು ಹೋಗಿದ್ದಾಳೆ.
ಕಸದ ಬುಟ್ಟಿಯಲ್ಲಿ ನವಜಾತ ಶಿಸುವನ್ನು ನೋಡಿದ ಸ್ಥಳೀಯರೊಬ್ಬರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಈ ಹುಡುಗಿಯ ಬಗ್ಗೆ ತಿಳಿದು ಪ್ರಶ್ನಿಸಿದಾಗ ಆಕೆ ಸತ್ಯ ಬಾಯಿಬಿಟ್ಟಿದ್ದಾಳೆ. ಬಳಿಕ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ತನಿಖೆಯ ವೇಳೆ ನಡೆದ ವಿಚಾರ ಸಂತ್ರಸ್ತೆ ಮನೆಯವರಿಗೆ ತಿಳಿದಿಲ್ಲ ಎಂಬುದಾಗಿ ತಿಳಿದುಬಂದಿದೆ.