Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಕೊಂದ ತಾಯಿ

ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಕೊಂದ ತಾಯಿ
ಅಸ್ಸಾಂ , ಶನಿವಾರ, 30 ಏಪ್ರಿಲ್ 2022 (09:00 IST)
ಅಸ್ಸಾಂ: ಅಕ್ರಮ ಸಂಬಂಧಕ್ಕೆ ಹುಟ್ಟಿದ ಒಂದು ದಿನದ ಮಗುವಿಗೆ ಉಪ್ಪು ಸೇವನೆ ಮಾಡಲು ಕೊಟ್ಟು ತಾಯಿಯೇ ಕೊಲೆ ಮಾಡಿದ್ದಾಳೆ.

ವಿವಾಹಿತ ಇಬ್ಬರು ಮಕ್ಕಳ ತಾಯಿಯಾದ ಮಹಿಳೆಗೆ ಈಗ ಗಂಡನ ಸಂಬಂಧಿಯೊಬ್ಬರ ಜೊತೆ ಅಕ್ರಮ ಸಂಬಂಧವಿತ್ತು. ಆಕೆಯ ಪತಿ ಕೇರಳದಲ್ಲಿ ನೆಲೆಸಿದ್ದ. ಈ ವೇಳೆ ಆಕೆಗೆ ಮಗುವಾಗಿದ್ದು, ಮಗುವನ್ನು ಲವ್ವರ್ ನ ಸಲಹೆಯಂತೆ ಉಪ್ಪು ನೀಡಿ ಕೊಲೆ ಮಾಡಿದ್ದಾಳೆ. ಬಳಿಕ  ಮಗುವನ್ನು ಮನೆಯ ಹಿತ್ತಲಲ್ಲಿ ಹೂತು ಹಾಕಿದ್ದಾಳೆ.

ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದಾಗ ನಿಜ ಘಟನೆ ಬಯಲಾಗಿದೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

40 ವರ್ಷದ ವ್ಯಕ್ತಿಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ