Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತ್ಯಾಜ್ಯಗಳಿಂದ ತಯಾರಿಸಲ್ಪಟ್ಟ ಜಾಕೆಟ್ ಧರಿಸಿ ಸದನಕ್ಕೆ ಬಂದ ಮೋದಿ

ತ್ಯಾಜ್ಯಗಳಿಂದ ತಯಾರಿಸಲ್ಪಟ್ಟ ಜಾಕೆಟ್ ಧರಿಸಿ ಸದನಕ್ಕೆ ಬಂದ ಮೋದಿ
ನವದೆಹಲಿ , ಗುರುವಾರ, 9 ಫೆಬ್ರವರಿ 2023 (14:43 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸದನಕ್ಕೆ ತ್ಯಾಜ್ಯಗಳಿಂದ ತಯಾರಿಸಲ್ಪಟ್ಟ ಜಾಕೆಟ್ ಅನ್ನು ಧರಿಸಿ ಬಂದಿದ್ದು ವಿಶೇಷವಾಗಿತ್ತು.

ಸೋಮವಾರ ಮೋದಿ ಬೆಂಗಳೂರಿಗೆ ಬಂದಿದ್ದಾಗ ಜಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ಜಾಕೆಟ್ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಲಾದ ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ರಾಜ್ಯಸಭೆಯಲ್ಲಿ ತಿಳಿ ನೀಲಿ ಬಣ್ಣದ ಸದ್ರಿ ಜಾಕೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಬೆಂಗಳೂರಿನ ಮಾದವಾರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ ಭಾರತ ಇಂಧನ ಸಪ್ತಾಹ-2023ಕ್ಕೆ ಫೆ. 6ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದರು.

ಅಷ್ಟೇ ಅಲ್ಲದೇ ಇಂಡಿಯಾ ಎನರ್ಜಿ ವೀಕ್ನ ಅಂಗವಾಗಿ ಅಜೆರ್ಂಟೀನಾದ ವೈಪಿಎಫ್ ಅಧ್ಯಕ್ಷ ಪಾಬ್ಲೊ ಗೊನ್ಜಾಲೆಜ್ ಅವರು, ವಿಶ್ವಕಪ್ ವಿಜೇತ ಚಾಂಪಿಯನ್ ಲಿಯೊನೆಲ್ ಮೆಸ್ಸಿ ಅವರ ಹೆಸರನ್ನು ಒಳಗೊಂಡ ಅರ್ಜೆಂಟೀನಾ ಫುಟ್ಬಾಲ್ ತಂಡದ ಜೆರ್ಸಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಬಜೆಟ್ನಲ್ಲಿ ಬಂಪರ್ ಕೊಡುಗೆ ಸುಳಿವು ನೀಡಿದ ಸಚಿವ ಸುಧಾಕರ್