ಪ್ರಧಾನ ಮಂತ್ರಿ ಮೋದಿಯವರು ಸೋಮವಾರ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯ ಕುರಿತು ಬಾರಿ ವಾಗ್ದಾಳಿಯನ್ನು ನಡೆಸಿದರು, ಅಲ್ಲದೇ ಕಾಂಗ್ರೆಸ್ ಸರಕಾರದ 10% ಕಮಿಷನ್ ಕುರಿತು ಮಾತನಾಡಿದ ಅವರು ನಿಮಗೆ ಕಮಿಷನ್ ತೆಗೆದುಕೊಳ್ಳುವ ಸರಕಾರ ಬೇಕಾ ಇಲ್ಲವೇ ಮಿಷನ್ (ಗುರಿ) ಹೊಂದಿರುವ ಬಿಜೆಪಿ ಸರಕಾರ ಬೇಕಾ ಎನ್ನುವುದನ್ನು ಜನರೇ ನಿರ್ಧರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಂತರ ರ್ಯಾಲಿ ಒಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಸ್ತುತವಿರುವ ರಾಜ್ಯ ಸರಕಾರ ಪ್ರತಿಯೊಂದು ಕೆಲಸಗಳಿಗೂ 10% ಕಮಿಷನ್ ತೆಗೆದುಕೊಳ್ಳುತ್ತದೆ, ಇದೇ ರೀತಿಯ ವ್ಯವಹಾರ ಮುಂದುವರಿಯುತ್ತಿದ್ದರೆ ಇದು ರಾಜ್ಯವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತದೆ. ನೀವು ಕಮಿಷನ್ ಸರ್ಕಾರವನ್ನು ಬಯಸುತ್ತೀರಾ ಅಥವಾ ಮಿಷನ್ (ಗುರಿ) ಹೊಂದಿರುವ ಬಿಜೆಪಿ ಸರ್ಕಾರವನ್ನು ಬಯಸುತ್ತೀರಾ? ಎಂದು ಜನರ ಮುಂದೆ ತಮ್ಮ ಪ್ರಶ್ನೆಯನ್ನು ಇಟ್ಟು ನೀವೇ ನಿರ್ಧರಿಸಿ ಎಂದು ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ, ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾಲೋಚನೆಯಲ್ಲಿ ಅವಧಿಯಲ್ಲಿ ಮಾತನಾಡಿದ ಮಹಾರಾಜಾ ಕಾಲೇಜಿನ ಮೈದಾನದ ಅದೇ ಸ್ಥಳದಲ್ಲಿ ಮೋದಿ ಮಾತನಾಡಿದ್ದು, ಈ ವೇಳೆಯಲ್ಲಿ 10% ಕಮಿಷನ್ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಕೆಲವರು ನನಗೆ ಕರೆಗಳನ್ನು ಮಾಡಿದ್ದಾರೆ ಅದನ್ನು ನಾನು ಸ್ವೀಕರಿಸಿದ್ದೇನೆ ಮತ್ತು ಸಂದೇಶಗಳನ್ನು ಸಹ ಕಳುಹಿಸಿದ್ದಾರೆ ಎಂದು ಕುಹಕವಾಡಿದರು.
ತಮ್ಮ ಭಾಷಣವನ್ನು ಕನ್ನಡದಲ್ಲಿ ಆರಂಭಿಸಿ ಕನ್ನಡದಲ್ಲೇ ಮುಗಿಸಿದ ಮೋದಿ, ತಮ್ಮ ಮಾತಿನ ಮಧ್ಯೆ ಕುರ್ಚಿಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸರಕಾರ ಆಸಕ್ತಿ ಹೊಂದಿದೆ, ಅಲ್ಲದೇ ಕಾಂಗ್ರೆಸ್ ಸರಕಾರದ ನಾಯಕರಿಗೂ ದೇಶದ ಅಭಿವೃದ್ಧಿಯ ಕುರಿತು ಯಾವುದೇ ಚಿಂತೆಯಿಲ್ಲ ಇವರೆಲ್ಲರೂ ಸಂಕುಚಿತ ಮನೋಭಾವನೆ ಹೊಂದಿದ್ದಾರೆ, ಅಷ್ಟೇ ಅಲ್ಲ ಪ್ರತಿ ದಿನವೂ ಕೆಲಸದ ಮಂಜೂರಾತಿಗಾಗಿ ಸಾವಿರಾರು ಕಡತಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ ಮತ್ತು ಅವರಿಗೆ ಈ ಕುರಿತು ಯಾವುದೇ ನಾಚಿಕೆಯೂ ಇಲ್ಲ. ಇಂತಹ ಸರಕಾರದಿಂದ ಕರ್ನಾಟಕವನ್ನು ಮುಕ್ತಗೊಳಿಸಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಾಕಷ್ಟು ಅನುದಾನಗಳನ್ನು ನೀಡುತ್ತಿದೆ. ಅದನ್ನು ರಾಜ್ಯ ಸರಕಾರ ರಾಜಕೀಯ ಕಾರಣಗಳಿಗೆ ಬಳಸಬಾರದು ಎಂದು ಹೇಳಿದ್ದಲ್ಲದೇ, ತಮ್ಮ ಪುನರಾವರ್ತಿತ ಸುಳ್ಳುಗಳ ಮೂಲಕ ಅವರು ಸಮಾಜವನ್ನು ವಿಭಜಿಸುವ ಮತ್ತು ತಪ್ಪುದಾರಿಗೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸರಕಾರ ಕುರಿತು ಆರೋಪಿಸಿದ್ದಾರೆ.