Publish Date: Sun, 07 Mar 2021 (09:56 IST)
Updated Date: Sun, 07 Mar 2021 (09:59 IST)
ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ಇಂದು ನಡೆಯಲಿರುವ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಇಂದು ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಪ.ಬಂಗಾಲ ಚುನಾವಣಾ ರಣಕಣ ರಂಗೇರಿದ್ದು ಇಂದು ಮೋದಿ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಮೆಗಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಂಗಾಳದ ಬಿಜೆಪಿ ಚುನಾವಣಾ ಪರಿವೀಕ್ಷಕ ವಿಜಯವಾರಿಗ್ಯ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯಿತ್ತು. ಇದೀಗ ಅದು ಅಧಿಕೃತವಾಗಿದೆ. ಕಳೆದ ರಾತ್ರಿ ಬಿಜೆಪಿ ನಾಯಕರ ಜೊತೆಗೆ ಮಿಥುನ್ ಚಕ್ರವರ್ತಿ ಚರ್ಚೆಯನ್ನೂ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅವರ ದೇಶಪ್ರೇಮ ಮತ್ತು ಬಡವರ ಪರ ನಿಲುವು ನಮ್ಮ ಗಮನಸೆಳೆದಿದೆ ಎಂದು ಬಿಜೆಪಿ ಹೇಳಿದೆ.