Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೋಲ್ಕೊತ್ತಾ: ಅಪ್ರಾಪ್ತ ಬಾಲಕಿ ಮೇಲೆ ಅಕ್ಕನ ಬಾಯ್ ಫ್ರೆಂಡ್ ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ಕೋಲು ತುರುಕಿ ಚಿತ್ರಹಿಂಸೆ ನೀಡಿದ್ದಾನೆ.
ರಕ್ತಸ್ರಾವವಾಗಿ ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ 22 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನ ತಂಗಿಯನ್ನು ರಾತ್ರಿ ಬಿಟ್ಟು ಹೋದರೆ ಹೊಸ ಫೋನ್ ಮತ್ತು ಹಣ ಕೊಡುವುದಾಗಿ ಆರೋಪಿ ಪ್ರೇಯಸಿಗೆ ಆಮಿಷವೊಡ್ಡಿದ್ದ. ಅದರಂತೆ ಆಕೆ ತನ್ನ ತಂಗಿಯನ್ನು ಆತನ ಮನೆಯಲ್ಲಿ ಬಿಟ್ಟಿದ್ದಳು. ರಾತ್ರಿಯಾದರೂ ಮಗಳು ಮನೆಗೆ ಬಾರದೇ ಇದ್ದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.