Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಭೋಪಾಲ್: ಅಪ್ರಾಪ್ತ ಬಾಲಕಿ ಮೇಲೆ ಎರಡು ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಸಾವನ್ನಪ್ಪಿದ ಘಟನೆ ಮಧ‍್ಯಪ್ರದೇಶದಲ್ಲಿ ನಡೆದಿದೆ.
ಮನೆಯ ಹೊರಭಾಗದಲ್ಲಿ ಬಾಲಕಿಯನ್ನು ಕಾಮುಕರು ಜೀಪ್ ನಲ್ಲಿ ಬಂದು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಸತತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ತಮ್ಮ ಕೃತ್ಯದ ಬಳಿಕ ಬಾಲಕಿಗೆ ವಿಷಾಹಾರ ನೀಡಿ ಜಿಲ್ಲಾಸ್ಪತ್ರೆ ಬಳಿ ಬಿಟ್ಟು ತೆರಳಿದ್ದಾರೆ. ಘಟನೆ ಕುರಿತು ಹೇಳಿಕೆ ನೀಡಿದ್ದ ಬಾಲಕಿ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಇನ್ನು, ಆರೋಪಿಗಳಲ್ಲಿ ಒಬ್ಬಾತನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಸಂಶಯಿಸಲಾಗಿದೆ. ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.