ಲಕ್ನೋ: ಹೋಳಿ ಹಬ್ಬದ ರಂಗು ಕೆಲವರಲ್ಲಿ ಖುಷಿ ತಂದಿದ್ದರೆ ಈ ಬಾಲಕಿಯ ಬದುಕಿನಲ್ಲಿ ಕತ್ತಲು ನೀಡಿದೆ.
ಹೋಳಿ ಹಬ್ಬವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿದ ಐವರು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಗಾಝಿಯಾಬಾದ್ ನಲ್ಲಿ ಈ ಘಟನೆ ನಡೆದಿದೆ.
ಬಾಲಕಿಯ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದಾರೆ. ಹೀಗಾಗಿ ಮಾವನ ಮನೆಯಲ್ಲಿದ್ದಳು. ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದರೆ ಅವರೂ ಸರಿಯಾಗಿ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.