ನವದೆಹಲಿ : ಲೋಕಸಭೆಯಲ್ಲಿ ತೃತೀಯ ಲಿಂಗಿಗಳಿಗೆ 'ಇನ್ನೊಂದು' ಎಂಬ ಪದ ಬಳಕೆ ಮಾಡಿರುವುದಕ್ಕೆ ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ, ಸೋಮವಾರ ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.
ಅಕ್ರಮವಾಗಿ ಮಾನವ ಸಾಗಾಣಿಕೆ ತಡೆಗಟ್ಟುವ ವಿಷಯವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎನ್ನುವ ಕುರಿತು ಗುರುವಾರ ಲೋಕಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮೇನಕಾ ಗಾಂಧಿ, ತೃತೀಯ ಲಿಂಗಿಗಳನ್ನು 'ಇನ್ನೊಂದು' ಎಂದು ಕರೆದಿದ್ದರು. ಈ ಬಗ್ಗೆ ತೃತೀಯ ಲಿಂಗಿ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜನ ಚಳವಳಿ ಹಾಗೂ ತೃತೀಯ ಲಿಂಗಿ ಮಹಳೆಯ ರಾಷ್ಟ್ರೀಯ ಮೈತ್ರಿಯ ಸದಸ್ಯೆಯಾಗಿರುವ ಮೀರಾ ಸಂಘಮಿತ್ರ ಅವರು, ಮೇನಕಾ ಗಾಂಧಿ ಅವರು ಈ ವಿಚಾರವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದರು.
ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಮೇನಕಾ ಗಾಂಧಿ ಅವರು,’ ಲೋಕಸಭೆಯಲ್ಲಿ ಮಾನವ ಸಾಗಾಟ ಮಸೂದೆ 2018ರ ಕುರಿತು ಚರ್ಚೆ ನಡೆಸುತ್ತಿರುವಾಗ 'ಇನ್ನೊಂದು' ಎಂಬ ಪದ ಬಳಸಿರುವುದಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ. ನಾನು ಅವರ ಬಗ್ಗೆ ನಕ್ಕಿದ್ದಲ್ಲ. ನನ್ನ ಅಜ್ಞಾನದ ಬಗ್ಗೆ ಮುಜುಗರವಾಗಿ ನಕ್ಕೆ. ತೃತೀಯ ಲಿಂಗಿ ಸಮುದಾಯಕ್ಕೆ ಅಧಿಕೃತವಾಗಿ ಯಾವ ಪದ ಬಳಕೆ ಮಾಡುತ್ತಾರೆ ಎಂಬ ಬಗ್ಗೆ ನನಗೆ ಅರಿವಿಲ್ಲ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ