Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲೆಫ್ಟಿನೆಂಟ್ ಗೌರ್ನರ್ ನೀಡಿದ ವರದಿಯೊಂದಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ ಉತ್ತರವೇನು ಗೊತ್ತಾ?

ಲೆಫ್ಟಿನೆಂಟ್ ಗೌರ್ನರ್ ನೀಡಿದ ವರದಿಯೊಂದಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ  ಉತ್ತರವೇನು ಗೊತ್ತಾ?
ನವದೆಹಲಿ , ಸೋಮವಾರ, 30 ಜುಲೈ 2018 (12:22 IST)
ನವದೆಹಲಿ : ರಾಜಧಾನಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಲೈಸನ್ಸ್ ಪಡೆಯುವುದರ ಕುರಿತು ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್ ಅವರು  ನೀಡಿದ್ದ ವರದಿಯೊಂದನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಾರ್ವಜನಿಕ ಸಮಾರಂಭದ ವೇದಿಕೆಯ ಮೇಲೆಯೇ ಹರಿದು ಹಾಕಿದ್ದಾರೆ.

ದೆಹಲಿ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್ ಅವರು ಸ್ಥಳೀಯ ವ್ಯಕ್ತಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾದರೆ ಲೈಸನ್ಸ್ ಪಡೆಯಬೇಕೆಂದು ತಿಳಿಸಿ ವರದಿಯೊಂದನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ನಡೆದ ನಗರದ  ನಿವಾಸಿಗಳ ಕಲ್ಯಾಣ ಸಂಘಗಳು ಹಾಗೂ ಮಾರುಕಟ್ಟೆ ಸಂಘಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಆ ವರದಿಯನ್ನು  ವೇದಿಕೆಯ ಮೇಲೆಯೇ ಹರಿದು ಹಾಕಿದ್ದಾರೆ.

 

ಹಾಗೇ ಈ ಕುರಿತು ಮಾತನಾಡಿದ ಅವರು,’ ಸ್ಥಳೀಯ ವ್ಯಕ್ತಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾದರೆ ಲೈಸನ್ಸ್ ಪಡೆಯಬೇಕೆಂದು ಲೆಫ್ಟಿನೆಂಟ್ ಗೌರ್ನರ್ ಹೇಳಿದ್ದಾರೆ. ಆದರೆ, ಪರವಾನಗಿ ಪಡೆಯಬೇಕೆಂದರೆ ಹಣ ನೀಡಬೇಕು. ಇಂಥ ಹಣ ವಸೂಲಿ ಮಾಡುವ ಆದೇಶವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ದಲಿತರ ಹಿತಾಸಕ್ತಿ ಕಾಪಾಡುವಲ್ಲಿ ಮೋದಿ ಸರ್ಕಾರ ವಿಫಲ- ರಾಹುಲ್ ಗಾಂಧಿ ವಾಗ್ದಾಳಿ