Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜೈಸಲ್ಮೇರ್ : 16 ವರ್ಷದ ಅಲ್ಪ ಸಂಖ್ಯಾತ ಸಮುದಾಯದ ಹುಡುಗಿಯನ್ನು ಇಬ್ಬರು ಪುರುಷರು ಮಾನಭಂಗ ಎಸಗಿ ಗಂಟಲು ಸೀಳಿ ಕೊಂದ ಘಟನೆ ರಾಜಸ್ಥಾನ ಬಾರ್ಮರ್ ಜಿಲ್ಲಯಲ್ಲಿ ವರದಿಯಾಗಿದೆ.
ಸಂತ್ರಸ್ತೆಯ ಕುಟುಂಬದ ಆಸ್ತಿಯಲ್ಲಿ ಒಂದು ಜಮೀನನ್ನು ಆರೋಪಿ ಹೊಂದಿದ್ದ ಎನ್ನಲಾಗಿದೆ. ಜಮೀನಿನ ಬಳಿ ಬಂದ ಹುಡುಗಿಯನ್ನು ರೈತನ ಸಹಾಯದಿಂದ ಅಪಹರಿಸಿದ ಆರೋಪಿ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಬಾಲಕಿಯ ಶವ ಹೊಲದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಗ್ರಾಮಸ್ಥರು ಆರೋಪಿಯನ್ನು ಬಂಧಿಸುವಂತೆ ಪ್ರತಿಭಟಿಸುತ್ತಿದ್ದಾರೆ ಎನ್ನಲಾಗಿದೆ.