Publish Date: Sat, 16 Jan 2021 (07:56 IST)
Updated Date: Sat, 16 Jan 2021 (07:57 IST)
ನವದೆಹಲಿ : 14 ವರ್ಷದ ಹುಡುಗನಿಗೆ ಲೈಂಗಿಕ ಪುನರ್ವಿತರಣೆಯ ಶಸ್ತ್ರಚಿಕಿತ್ಸೆ ಮಾಡಿಸಿದ ಪುರುಷರ ಗುಂಪೊಂದು ಬಳಿಕ ಆತನ ಮೇಲೆ ಅತ್ಯಾಚಾರ ಮಾಡಿ ಭಿಕ್ಷಾಟನೆ ಮತ್ತು ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಹುಡುಗ ನೃತ್ಯಗಾರನಾಗಿದ್ದು, ಕಾರ್ಯಕ್ರವೊಂದರಲ್ಲಿ ಆತನಿಗೆ ಆರೋಪಿಗಳ ಪರಿಚಯವಾಗಿದೆ. ಬಳಿಕ ನೃತ್ಯ ತರಬೇತಿ ನೀಡುವಂತೆ ಕರೆಸಿ ಆತನಿಗೆ ಮಾದಕ ದ್ರವ್ಯಗಳನ್ನು ನೀಡಿ ಲೈಂಗಿಕ ಪುನರ್ವಿತರಣೆಯ ಶಸ್ತ್ರಚಿಕಿತ್ಸೆ ಮಾಡಿಸಿ ಆತನ ಮೇಲೆ ಅತ್ಯಾಚಾರ ಎಸಗಿ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದಾರೆ ಹಾಗೇ ಭಿಕ್ಷಾಟನೆಗೆ ಕಳುಹಿಸಿದ್ದಾರೆ.
ಹುಡುಗ ಅವರಿಂದ ಹೇಗೋ ತಪ್ಪಿಸಿಕೊಂಡು ಬಂದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಕಾನೂನು ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸು ಎನ್ನಲಾಗಿದೆ.